Wednesday, July 18, 2012

ಮೊಬೈಲುಗಳಲ್ಲಿ ಕನ್ನಡದ ಬೆಂಬಲ ಬರಲಿ

HTC ಕಂಪನಿಯವರು  ತಮಿಳು, ಹಿಂದಿ ,ಮರಾಠಿ ಭಾಷೆಗಳ ಬೆಂಬಲವನ್ನು ಕೊಡುಲು ಮುಂದಾಗಿರುವ  ಸುದ್ದಿ ಬಂದಿದೆ. ಆದರೆ ಕನ್ನಡ ಭಾಷೆಯ ಬೆಂಬಲದ ಬಗೆಗೆ  ಪ್ರಸ್ತಾಪವೂ ಮಾಡಿಲ್ಲ. ಕನ್ನಡದಲ್ಲಿ ಸಹ ಮೊಬೈಲುಗಳನ್ನು ಹೊರತನ್ನಿ ಎಂದು HTC ಕಂಪನಿಯವರಿಗೆ ತಿಳಿಸಬೇಕಾಗಿದೆ.

ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳ ಬಳಕೆ ೪೦% ಅಷ್ಟು ಹೆಚ್ಚಾಗಿದೆ ಎಂಬ ವರದಿ ಇದೆ. ಯಾಹೂ ಮೇಯ್ಲ್, gmail ಎಲ್ಲದರಲ್ಲೂ ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದು ನೋಡಬಹುದು. Facebook ನಲ್ಲಿ ಸಹ ೯೩% ಅಷ್ಟು ಕನ್ನಡಕ್ಕೆ ನುಡಿಬದಲು ಆಗಿರುವುದನ್ನು ಗಮನಿಸಬಹುದು. ಅಷ್ಟೆ ಅಲ್ಲದೆ wiktionary ಯಲ್ಲಿ ಎರಡು ಲಕ್ಶಕ್ಕೂ ಹೆಚ್ಚು ಕನ್ನಡದ ಪದಗಳನ್ನು  ಹೊಂದಿದ್ದು, ೧೫ ನೇ ಸ್ಥಾನದಲ್ಲಿದೆ. 

ಮೊಬೈಲುಗಳು ಕನ್ನಡದ ಬೆಂಬಲ ಕೊಡುವುದು ಯಾಕೆ ಮುಖ್ಯ?
ಕೆಲ ತಿಂಗಳ ಹಿಂದೆ "mobile governance' ಗೆ ಆದ್ಯತೆ ಕೊಡಲಾಗುವುದು ಎಂಬ ಸುದ್ದಿ ಬಂದಿತ್ತು. ಮ್ಫುಂದ್ನೆ  ಬಿಲ್ಲು, ಎಲೆಕ್ಟ್ರಿಸಿಟಿ ಬಿಲ್ಲು ಗಳನ್ನು ಮೊಬೈಲುಗಳಿಂದಲೇ ಕಟ್ಟಬಹುದಾಗುತ್ತದೆ. ಗ್ಯಾಸ್ ಬುಕ್ ಮಾಡಿದಾಗ, ಏಟೀಎಂ ಗಳಿಂದ ಹಣ ತೆಗೆದಾಗ ತಕ್ಷಣವೇ ಎಸೆಂಎಸ್ ಗಳ ಮೂಲಕ ಮಾಹಿತಿ ನಮ್ಮ ಬಳಿ ಬಂದು ಸೇರುತ್ತದೆ.

ಹೀಗಿರುವಾಗ ನಾವು ಬಳಸುವ ಫೊನ್ ಗಳಲ್ಲಿ ಕನ್ನಡದ ಬೆಂಬಲವೇ ಇಲ್ಲದೇ ಹೋದಾಗ ಈ ಸೇವೆಗಳನ್ನು ಕನ್ನಡದಲ್ಲಿ ಸಹ ಕೊಡಿ ಎಂದು ಕೇಳಲು/ಕೊಡಲು ಆಗುವುದಿಲ್ಲ. ಬೆಂಗಳೂರು ಟ್ರಾಫ಼ಿಕ್ ಪೋಲಿಸ್ ನವರು ಸಹ ಕನ್ನಡದಲ್ಲಿ ರಸೀತಿ ಕೊಡಿ ಎಂದು ಕೇಳಿದಾಗ ತಾವು ಬಳಸುವ ಬ್ಲಾಕ್ಬೆರಿ ಫೊನ್ ನಲ್ಲಿ ಕನ್ನಡದ ಬೆಂಬಲ ಇಲ್ಲ, ಹಾಗಾಗಿ ಕನ್ನಡದಲ್ಲಿ ರಸೀತಿ ಕೊಡಲು ಆಗದು ಎಂದು ತಿಳಿಸಿದ್ದರು.

 ತಂತ್ರಜ್ಞಾನ ಎಷ್ಟು ಮುಂದೆ ಹೋದರೇನು , ಕನ್ನಡಿಗನಿಗೆ ಅದನ್ನು ಬಳಸಲು ಆಗದಿದ್ದರೆ ಅದರಿಂದ ಏನು ಪ್ರಯೋಜನ?

ನಾವೇನು ಮಾಡಬೇಕು
HTC ಸೇರಿದಂತೆ ಎಲ್ಲಾ ಮೊಬೈಲ್ ಫೋನ್ ತಯಾರಿಸುಗರಿಗೆ ಕನ್ನಡದ ಬೆಂಬಲ ಬೇಕು ಎಂದು ಒತ್ತಾಯಿಸೋಣ. ಹೊಸ ಮೊಬೈಲುಗಳನ್ನು ಕೊಳ್ಳುವಾಗ ಕನ್ನಡದ ಆಯ್ಕೆ ಇರುವ ಫೋನ್ ಗಳಿಗೆ ಆದ್ಯತೆ ಕೊಡೋಣ. ಹೆಚ್ಚು ಜನ ಒತ್ತಾಯಿಸಿದರೆ, ಮಾರುಕಟ್ಟೆಯ ಬೇಡಿಕೆ ಏನು ಎಂದು ತಯಾರಿಸುಗರಿಗೆ ತಿಳಿಯುತ್ತದೆ. 

HTC ಗೆ ಬರೆಯಲು:

Samsung 

Nokia ಗೆ ಬರೆಯಲು:
http://www.nokia.com/in-en/support/contact/

Micromax ಗೆ ಬರೆಯಲು:
http://www.micromaxinfo.com/contactus.php

LG ಗೆ ಬರೆಯಲು:

Tuesday, July 3, 2012

ಇಂಟರ್ನ್ಯಾಶನಲ್ ಏರ್ಪೋರ್ಟ್ ಆದ ಮಾತ್ರಕ್ಕೆ ಕನ್ನಡಾನ ಕಡೆಗಣಿಸಬೇಕಾ?

ಇತ್ತೀಚೆಗೆ ಗಳೆಯರೊಬ್ಬರು ಬೆಂಗಳೂರಿನ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಸರಿಯಾದ ಪ್ರಾಮುಖ್ಯತೆ ಕೊಡದೆ ಇರುವ ಬಗೆಗೆ ದೂರು ಕೊಟ್ಟಿದ್ದರು. ಅಲ್ಲಿನ ಅಧಿಕಾರಿಗಳು   ಪ್ರಾಮುಖ್ಯತೆ ಯಾಕೆ ಕೊಡಲಾಗಿಲ್ಲ ಅನ್ನುವುದಕ್ಕೆ ಹೀಗೆ ಸಮರ್ಥಿಸಿಕೊಂಡಿದ್ದರು
  • ಸಮೀಕ್ಷೆಯ ಪ್ರಕಾರ ಇಂಗ್ಲೀಷ್  ಭಾಷೆ ಓಡಾಡುಗರಲ್ಲ್ಲಿ ಅತಿ ಹೆಚ್ಚು  ಜನರಿಗೆ ಬರುವ ಭಾಷೆಯಾಗಿದೆ.  ಸೂಚನಾ ಫಲಕಗಳನ್ನು ಜನರಿಗೆ ಸುಲಭವಾಗಿ ಹೆಚ್ಚು ಜನರಿಗೆ ಅರ್ಥವಾಗುವಂತೆ ಇಂಗ್ಲೀಷ್ ಗೆ ಪ್ರಾಮುಖ್ಯತೆ ಕೊಡಲಾಗಿದೆ. ಇದು "world class design"  ಅಂತ ಸಹ ಹೇಳಿದಾರೆ.
  • ನಮ್ಮ ದೇಶ ಹಲವಾರು ಭಾಷಿಗರನ್ನು ಕೂಡಿರುವುದರಿಂದ ಜಪಾನ್, ಜರ್ಮನಿ  ಮೊದಲಾದ ಒಂದೇ ಭಾಷೆಯನ್ನಾಡುವ ದೇಶಗಳಲ್ಲಿ ಆ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವಂತೆ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಲಾಗುವುದಿಲ್ಲ
  • ಸ್ಥಳೀಯ ಜನರ ಅನುಕೂಲಕ್ಕಾಗಿ ಹಿಂದಿ ಹಾಗೂ ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ಸಹ ಹಾಕಿದ್ದೀವಿ
  • ಈಗಿರುವಂತೆಯೆ ವಿಮಾನ ನಿಲ್ದಾಣಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ

ಅರೆರೆ, ಎಲ್ಲ ಸರಿಯಾಗೆ ಇದೆಯಲ್ಲ ಮತ್ತೆ ಕ್ಯಾತೆ ಯಾಕೆ ಅಂತೀರ? ಇವರ ಉತ್ತರದಲ್ಲಿ ಜೊಳ್ಳು ಎಷ್ಟು ಕಾಳು ಎಷ್ಟು ಅಂತ ನೋಡೋಣ ಬನ್ನಿ 

ಕನ್ನಡಕ್ಕೆ ಪ್ರಾಮುಖ್ಯತೆ ಕೊಟ್ಟರೆ ಅದು "World class design" ಆಗಲ್ಲ್ವ?
ಬಹಳಷ್ಟು ಕಡೆ ಈ ವಿಷಯವಾಗಿ ಚರ್ಚೆ ಮಾಡುವಾಗ ಹೆಚ್ಚಾಗಿ ಕನ್ನಡಿಗರಿಂದಲೇ  ಬರುವ ಪ್ರತಿಕ್ರಿಯೆ ಏನೆಂದರೆ "ಅದು  ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣ. ಅಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಲು ಹೇಗೆ ಸಾಧ್ಯ " ಎಂದು. ನಾನು ನೋಡಿರುವ ಬೇರೆ ದೇಶಗಳ ವಿಮಾನ ನಿಲ್ದಾಣಗಳ ಕೆಲವು  ಚಿತ್ರಗಳನ್ನು ಇಲ್ಲಿ ಹಾಕಿದೀನಿ. ತಮ್ಮ ತಮ್ಮ ಭಾಷಗಳಿಗೆ ಪ್ರಾಮುಖ್ಯತೆ ಕೊಟ್ಟು ದೇಶ ವಿದೇಶದ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿವೆ. 

ಇದು ಬ್ಯಾಂಗ್ಕಾಕ್ ವಿಮಾನ ನಿಲ್ದಾಣದಲ್ಲಿ ತೆಗೆದದ್ದು. ಅವರ ತಾಯಿ ನುಡಿ "ತಾಯ್" ಭಾಶೆಗೆ ಕೊತ್ತಿರುವ ಪ್ರಾಮುಖ್ಯತೆ ಎದ್ದು ಕಾಣುತ್ತದೆ. ವಿಮಾನಗಳ ಬರುವಿಕೆ/ಹಾರುವಿಕೆ ಬಗೆಗೆ ತಿಳಿಸುವ  Electronic Display ಗಳಲ್ಲಿ ಸಹ ಅವರ ಭಾಷೆ ರಾರಾಜಿಸುತ್ತಿದೆ.

ಇಲ್ಲಿ  ನೋಡಿ  ಬೀಜಿಂಗ್ ನ ವಿಮಾನ ನಿಲ್ದಾಣ ಸಹ ಇದಕ್ಕೆ ಹೊರತೇನಲ್ಲ

ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆ ಮಾತಾಡುವ ಜನರಿದ್ದಾಗ ಕನ್ನಡಕ್ಕ ಪ್ರಾಮುಖ್ಯತೆ ಕೊಡೋದು ಸರಿಯೆ?
ಹೌದು. ಬೆಂಗಳೂರಿನಲ್ಲಿ ತಮಿಳು,ತೆಲುಗು, ಹಿಂದಿ ಹೀಗೆ ಬೇರೆ ಭಾಷೆ ಮಾತಾಡೋರು ಇದಾರೆ. ಹಾಗಂತ ಕರ್ನಾಟಕದಲ್ಲಿ ಪ್ರಾಮುಖ್ಯತೆ ಕೊಡಬಾರದು ಅಂತೇನಿಲ್ಲ. ತಮ್ಮ ತಮ್ಮ ಭಾಷೆಗಳನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಕಾಪಾಡಿಕೊಳ್ಳಲಿ ಎಂದೆ ನಮ್ಮ ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ಬಿಡಿಸಿರುವುದು. 

ಸಂವಿಧಾನದ ಆಶಯದಂತೆ "ವೈವಿಧ್ಯತೆಯಲ್ಲಿ ಏಕತೆ" ಯನ್ನು ಎತ್ತಿ ಹಿಡಿಯಬೇಕಾದರೆ, ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲೇ ಬೇಕು. ನಮ್ಮತನವನ್ನು ಎತ್ತಿ ಹಿಡಿಯಲು ಹೆಮ್ಮೆ ಪಡುವ ಬದಲು ನಾಚಿಕೆ ಪಡುತ್ತಿರುವುದು ವಿಪರ್ಯಾಸವೆ ಸರಿ.

ಇಂಗ್ಲೀಷ್ ಹಿಂದಿ ಜೊತೆಗೆ ಚಿಕ್ಕದಾಗಿ ಕನ್ನಡದಲ್ಲಿ ಹಾಕಿದೆ ಸಾಕಲ್ಲ್ವ?
ಕನ್ನಡ ನೆಲದಲ್ಲಿ ಕಟ್ಟಿರುವ ವಿಮಾನ ನಿಲ್ದಾಣದಲ್ಲಿ ಮೊದಲ ಆದ್ಯತೆ ಕೊಡಬೇಕಾದದ್ದು ಕನ್ನಡಕ್ಕೆ ಹೊರತು ಬೇರೆ ಭಾಷೆಗೆ ಅಲ್ಲ. "ಇತರರೂ" ಬಳಸುವುದರಿಂದ ಇಂಗ್ಲೀಷ್ ಅಲ್ಲಿ ಸಹ ಹಾಕುವುದು ಸರಿಯಾದ ಬಗೆ. ಸಲ್ಲದ ಹಿಂದಿಯ ಬಳಕೆಯನ್ನು ಸಹ ನಿಲ್ಲಿಸಬೇಕು. 

ಆದರೆ ಇಲ್ಲಿ  ಮೊದಲನೆಯದಾಗಿ ಹಿಂದಿ, ಇಂಗ್ಲೀಷ್ ನಲ್ಲಿ ಹಾಕಬೇಕು, ನಂತರ ಕನ್ನಡದಲ್ಲಿ ಹಾಕುವುದರ ಬಗೆಗೆ ಯೋಚಿಸಬಹುದು ಅನ್ನುವ ಮನಸ್ಥಿತಿ  ಎದ್ದು ಕಾಣುತ್ತದೆ. ಇಲ್ಲಿ ಕನ್ನಡಿಗರೇ "ಇತರರಾಗಿ" ಇವರ ಕಣ್ಣಿಗೆ ಕಾಣುತ್ತಾರೋ ಏನೋ.

ಈಗಿರುವಂತೆಯೆ ವಿಮಾನ ನಿಲ್ದಾಣಕ್ಕೆ ಬಹಳಶ್ಟು ಮೆಚ್ಚುಗೆ ವ್ಯಕ್ತವಾಗಿದೆಯಲ್ಲಾ, ಮತ್ತೇನು?
 ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಛೀ ಮಾರಿ ಹಾಕಿ, ಕನ್ನಡಕ್ಕೆ ಪ್ರಾಶಸ್ತ್ಯ ಕೊಡಬೇಕು ಅಂತ ಆಗ್ರಹಿಸಿದೆ.  ಬಹಳ ಜನರು ಈ ಬಗೆಗೆ ದೂರು ಕೊಟ್ಟಿದಾರೆ ಅಂತ ಪ್ರಾಧಿಕಾರ ಬರೆದಿರುವ ಪತ್ರದಲ್ಲಿ   ನೋಡಬಹುದು. ಈ ವಿಷಯವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ದೂರು ಕೊಟ್ಟು ಮೂರು ವರುಷವಾಗಿದೆ, ಆದರೂ ಈ ಬಗೆಗೆ ಏನೂ ಮಾಡಿಲ್ಲ ಎಂದು ಸಹ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಅಂಗವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆದೇಶವನ್ನೇ ಗಾಳಿಗೆ ತೂರಿದ BIAL ಗೆ ಕರ್ನಾಟಕದ ಯಾವ ಕಾನೂನು ತಮಗೆ ಅನ್ವಯವಾಗುವುದಿಲ್ಲ ಎಂಬ ಧೋರಣೆ ಇದ್ದಂತೆ ತೋರುತ್ತದೆ,

ಇಲ್ಲಿ ತಂತ್ರಗಾರಿಕೆಯ ಬಗೆಗೆ ಎರಡನೆ ಮಾತಿಲ್ಲ. ಅಚ್ಚು ಕಟ್ಟಾಗಿದೆ. ಆದರೆ ಇಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗದೆ ಯಾರೊ ನಾಲ್ಕು ಜನ ಹೊರಗಿನವರು ಬಂದು ಹೊಗಳಿದ್ದಕ್ಕೆಸಂತೋಷ ಪಟ್ಟರೆ ಹೇಗೆ? BIAL ನಮ್ಮ ನಾಡಿನಲ್ಲಿ  "ಮನೆಗೆ ಮಾರಿ ಊರಿಗೆ ಉಪಕಾರಿ" ಆದಂತಿದೆ.

ಕನ್ನಡದ ಕಡೆಗಣನೆ ಬಗೆಗೆ ದನಿಯೆತ್ತೋಣ
ಈ ಬಗೆಯ ಕನ್ನಡದ ಕಡೆಗಣನೆ ಬಗೆಗೆ ನಾವೆಲ್ಲರೂ ಸೇರಿ ದನಿಯೆತ್ತಬೇಕು. ಒಂದು ವಿಮಾನ ನಿಲ್ದಾಣ ಆ ನಗರದ ಸೊಗಡನ್ನು ಹೊರಗಿನ ಪ್ರಪಂಚಕ್ಕೆ ಪಸರಿಸುವಂತಿರಬೇಕು. ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣ ಇಲ್ಲಿಯ ಭಾಷೆ ಸಂಸ್ಕೃತಿಯ ಪ್ರತೀಕವಾಗಬೇಕು.

 BIAL ಗೆ ದೂರು  ಇಲ್ಲಿ ಬರೆಯಿರಿ feedback@bialairport.com

Friday, June 22, 2012

ತ್ರಿಭಾಷಾ ಸೂತ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೇಗೆ ಅನ್ವಯ ಆಗುತ್ತದೆ?

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದರ ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಹ ಕಳಿಸಿದ್ದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತರ  ಸಹ ಬಂತು. 

ಅಭಿವ್ರುದ್ಧಿ  ಪ್ರಾಧಿಕಾರವು ಇದರ ಬಗ್ಗೆ ಗಮನಹರಿಸಿ ಪತ್ರ ಬರೆದಿರುವುದು ನಿಜಕ್ಕು ಸಂತೋಷದ ವಿಚಾರ. ಆದರೆ ಪ್ರಾಧಿಕಾರವು ತ್ರಿಭಾಷಾ ಸೂತ್ರದ ಬಳಕೆಯ ಬಗೆಗಿನ ಅರಿವು ಸರಿಯಿಲ್ಲದ್ದಾಗಿದೆ. ತ್ರಿಭಾಷ ಸೂತ್ರ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆ. ಬೆಂಗಳೂರಿನ ವಿಮಾನ ನಿಲ್ದಾಣ ಕೇಂದ್ರ ಸರಕಾರಿ ಕಚೇರಿಯಲ್ಲದ್ದರಿಂದ  ತ್ರಿಭಾಷ ಸೂತ್ರ ಅನ್ವಯವಾಗುವುದಿಲ್ಲ ಎನ್ನುವುದನ್ನು ತಿಳಿಯಬೇಕಾಗಿದೆ  

ಸುಖಾ ಸುಮ್ಮನೆ ನಮ್ಮ ಮೇಲೆ ನಾವೆ ಹಿಂದಿಯನ್ನು  ಹೇರಿಕೊಳ್ಳುವುದನ್ನು ನಾವು ನಿಲ್ಲಿಸಬೇಕು.  ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗೆಗೆ ಎಚ್ಚರ ವಹಿಸಿ ಸಲ್ಲದ ಹಿಂದಿ ಹೇರಿಕೆಗೆ ಕಡಿವಾಣ ಹಾಕಬೇಕು.

ಕನ್ನಡ ಅಭಿವೃದ್ಢಿ ಪ್ರಾಧಿಕಾರದಿಂದ ಬಂದ ಉತ್ತರ ಹೀಗಿದೆ:
********************************************************************

     ಸಂಖ್ಯೆ: ಕಅಪ್ರಾ:ಅ:     :೨೦೧೨-೧೩   
                                                                      ದಿನಾಂಕ: ೨೦-೦೬-೨೦೧೨
      ಮಾನ್ಯರೆ,

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಶಾಸ್ತ್ರೀಯ ಸ್ಥಾನಮಾನ ದೊರೆಕಿರುವ ಹಿನ್ನಲೆಯಲ್ಲಿ ಕನ್ನಡ ಭಾಷೆಯನ್ನು ಎಲ್ಲಾ ಹಂತದಲ್ಲೂ ಬಳಕೆ ಆಗಬೇಕೆನ್ನುವುದು ಸರ್ಕಾರದ ಆಶಯ ಹಾಗೂ ದಿಟ್ಟ ನಿಲುವು. 
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡವನ್ನು ಬಳಸುತ್ತಿಲ್ಲ ಎನ್ನುವ ಬಗ್ಗೆ ಬಹಳಷ್ಟು ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ದಿನಾಂಕ ೨೯-೦೪-೨೦೦೯ರಿಂದಲೂ ಪತ್ರ ಬರೆಯುತ್ತಾಲೇ ಬಂದಿದ್ದೇನೆ.  ಆದರೂ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸದಿರುವುದು, ಕನ್ನಡ ಬಳಸಿರುವ ಕಡೆ ಪ್ರಾಮುಖ್ಯತೆ ನೀಡದಿರುವುದು ದುರದುಷ್ಟಕರ. ಬೇರೆ ದೇಶದ ವಿಮಾನ ನಿಲ್ದಾಣಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಪ್ರಾಧ್ಯಾನತೆ ನೀಡಿರುವ ಬಗ್ಗೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಗ್ಗೆ ರವಿಯವರ ಮನವಿಯನ್ನು ಲಗತ್ತಿಸಿದೆ. ಅಲ್ಲದೆ ವಿಮಾನ ನಿಲ್ದಾಣದ ಅಧಿಕಾರಿಗಳು ಕನ್ನಡವನ್ನು ಲಘುವಾಗಿ ಪರಿಗಣಿಸುತ್ತಿರುವ ಬಗ್ಗೆ ಜೂನ್ ೨೦, ೨೦೧೨ರ ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ವಾಚಕರ ವಿಜಯ ಅಂಕಣದಲ್ಲಿ ಪ್ರಕಟಗೊಂಡಿರುವ “ಕನ್ನಡ ಕಡೆಗಣನೆ” ಸುದ್ದಿಯ ತುಣುಕನ್ನು ಇದರೊಂದಿಗೆ ಲಗತ್ತಿಸಿದೆ.

     ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳ್ಳಿಸುವಲಿ, ವಿಮಾನ ನಿಲ್ದಾಣದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಕನ್ನಡ ನೆಲದ ಕಾನೂನಿಗೆ ಅಗೌರವ ತೋರುತ್ತಿರುವುದೇ ಅಲ್ಲದೆ, ಕನ್ನಡ ನಾಡಿನ ಜನರ ತೆರಿಗೆ ಹಣದಲ್ಲಿ ಜೀವನ ನಿರ್ವಹಿಸುತ್ತಿರುವ ಅಧಿಕಾರಿಗಳು ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನೋಭೂಮಿಕೆಯನ್ನು ಬೆಳಸಿಕೊಳ್ಳುವ ಮೂಲಕ ಉದ್ದಟತನ ಪ್ರದರ್ಶಿಸುತ್ತಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.

     ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರತಕ್ಕದು ಮತ್ತು ಭಾಷೆಗಳನ್ನು ಬಳಸುವ ಸಂದರ್ಭದಲ್ಲಿ ಕನ್ನಡ ಆವೃತ್ತಿಯ ಕೆಳಗೆಬರತಕ್ಕದು.  ಕನ್ನಡ ನಾಮಫಲಕವನ್ನು ಹೆಚ್ಚು ಎದ್ದುಕಾಣುವಂತೆ ಬರೆಸತಕ್ಕದು. ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿ ಅಂತರ್ಜಾಲತಾಣದಲ್ಲಿ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಬೇಕು. ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆಯ ಚೀಟಿಯನ್ನು ಆಂಗ್ಲಭಾಷೆಯ ಜೊತೆಗೆ ಕನ್ನಡವನ್ನು ಪ್ರಧಾನವಾಗಿ ಮುದ್ರಿಸುವುದು. ಅಲ್ಲದೆ ಇತರಭಾಷಾ ಪತ್ರಿಕೆಗಳ ಜೊತೆ ಕನ್ನಡ ಪತ್ರಿಕೆಗಳು ದೊರೆಯುವಂತೆ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ.  ತಾವು ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡುವುದು.

      ವಂದನೆಗಳೊಂದಿಗೆ,
                           ತಮ್ಮ ವಿಶ್ವಾಸಿ,
                                        -ಸಹಿ-
                                        (ಡಾ. ಮುಖ್ಯಮಂತ್ರಿ ಚಂದ್ರು)
ಶ್ರೀ ರಾಜ್‌ಕುಮಾರ್ ಖತ್ರಿ  ಭಾ.ಆ.ಸೇ.,
ಪ್ರಧಾನ ಕಾರ್ಯದರ್ಶಿಗಳು,
ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ,
ವಿಕಾಸಸೌಧ, 
ಬೆಂಗಳೂರು
ಪ್ರತಿಯನ್ನು: ಶ್ರೀ ರವಿ, ಬೆಂಗಳೂರು ಇವರಮಾಹಿತಿಗಾಗಿ

********************************************************************

ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಲ್ಲಿ ಕಡದ ಕಡೆಗಣನೆ ಬಗೆಗೆ ನಾನು ಬರೆದ ಪತ್ರ

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಾನು ಬರೆದ ದೂರು ಹೀಗಿದೆ . 
********************************************************************
ಮಾನ್ಯ ಮುಖ್ಯಮಂತ್ರಿಗಳೇ,
ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಆಗುತ್ತಿರುವುದರ ಬಗೆಗೆ ನಾನು ಬರೆದ ದೂರನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. 

ಎಲ್ಲ ಅಂತಾರಾಷ್ಟೀಯ ವಿಮಾನ ನಿಲ್ದಾಣಗಳಲ್ಲಿ ಆಯಾ ಜಾಗದ ಸೊಗಡನ್ನು ಆಯಾ ಜಾಗದ ಭಾಷೆಯನ್ನೂ ಹೊರಗಿನಿಂದ ಬಂದವರಿಗೆ ಮನ ಮುಟ್ಟುವಂತೆ ತೋರ್ಪಡಿಸಲಾಗಿದೆ. ಇಲ್ಲಿ bangkok, Beijing ನ ವಿಮಾನ ನಿಲ್ದಾಣದ ಚಿತ್ರಗಳನ್ನು ಲಗತ್ತಿಸಿದ್ದೇನೆ.

ಆದರೆ BIAL ನಲ್ಲಿ ಕನ್ನಡವನ್ನು ಕಾಟಾಚಾರಕ್ಕೆ ಬಳಸಿದಂತೆ  ಇದೆ. ಭೂತಗನ್ನಡಿ ಹಿಡಿದು ಕನ್ನಡದ ಅಕ್ಷರಗಳನ್ನು ಹುಡುಕಬೇಕು. ಹೆಚ್ಚಾಗಿ ಇಂಗ್ಲಿಷ್ ದಿನಪತ್ರಿಕೆಗಳನ್ನು ಇತ್ತು ಕಾಟಾಚಾರಕ್ಕೆ ಎಲ್ಲೋ ಒಂದು ಮೂಲೆಯಲ್ಲಿ ಕನ್ನಡದ ಒಂದೇ ಒಂದು ದಿನ ಪತ್ರಿಕೆಯನ್ನು ಇಡಲಾಗಿದೆ. ವಿಮಾನ ನಿಲ್ದಾಣದ ಮಿಮ್ಬಲೆಯಲ್ಲಿ ಹುಡುಕಿದರೂ ಒಂದೇ ಒಂದು ಅಕ್ಷರ ಕನ್ನಡದ ಅಕ್ಷರ ಕಾಣಿಸಲ್ಲ. ಪಾರ್ಕಿಂಗ್ ಮಾಡಿದಾಗ ಕೊಡುವ ಚೀಟಿಯಲ್ಲಿ ಸಹ ಕನ್ನಡ ಇಲ್ಲ.

ಈ ರೀತಿ ಕನ್ನಡದ ನೆಲದಲ್ಲಿರುವ , ಕನ್ನಡ ಜನರ ತೆರಿಗೆ ಹಣದಿಂದ ಕಟ್ಟಲಾಗಿರುವ, ಕನ್ನಡಿಗರಿಗೆ ಉಪಯೋಗವಾಗಲಿ ಎಂದು ಕರ್ನಾಟಕ ಸರ್ಕಾರ ಕಟ್ಟಿಸಿದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಆಗುತ್ತಿರುವುದು ವಿಪರ್ಯಾಸವೇ ಸರಿ. ಕನ್ನಡಿಗ ತನ್ನ ನಾಡಿನಲ್ಲೇ ಎರಡನೇ ದರ್ಜೆಯ ಪ್ರಜೆಯಂತೆ ಬದುಕುವ ಹೀನ ಪರಿಸ್ಥಿತಿ ಉಂಟಾಗಿದೆ.

ಈ ರೀತಿ ಕರ್ನಾಟಕದ ಭಾಷಾ ನೀತಿಯನ್ನು ಮೀರಿ ಹೊರಗಿನ ಜನರಿಗೆ ಮಣೆ ಹಾಕುತ್ತಿರುವ  BIAL ಗೆ  ಕನ್ನಡದ ಕಡೆಗಣನೆ ಮಾಡುವುದನ್ನು ನಿಲ್ಲಿಸಿ ಕನ್ನಡಕ್ಕೆ ಸರಿಯಾದ  ಸ್ಥಾನ ಮಾನ ಕೊಡಲು ನಿರ್ದೇಶಿಸಬೇಕೆಂದು ನನ್ನ ಮನವಿ.

--
ರವಿ

********************************************************************

ತ್ರಿಭಾಷಾ ಸೂತ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೇಗೆ ಅನ್ವಯ ಆಗುತ್ತದೆ?

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದರ ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಹ ಕಳಿಸಿದ್ದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತರ ಸಹ ಬಂತು. 

ಅಬಿವ್ರುದ್ದಿ ಪ್ರಾದಿಕಾರ ಇದರ ಬಗ್ಗೆ ಗಮನಹರಿಸಿ ಪತ್ರ ಬರೆದಿರುವುದು ನಿಜಕ್ಕು ಸಂತೋಶದ ವಿಚಾರ ಆದರೆ ಪ್ರಾದಿಕಾರವು ತ್ರಿಬಾಶಾ ಸೂತ್ರದ ಬಳಕೆಯ ಬಗೆಗಿನ ಅರಿವು ಸರಿಯಿಲ್ಲದ್ದಾಗಿದೆ. ತ್ರಿಭಾಷ ಸೂತ್ರ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆ.  ಬೆಂಗಳೂರಿನ ವಿಮಾನ ನಿಲ್ದಾಣ ಕೇಂದ್ರ ಸರಕಾರಿ ಕಚೇರಿಯಲ್ಲದ್ದರಿಂದ  ತ್ರಿಭಾಷ ಸೂತ್ರ ಅನ್ವಯವಾಗುವುದಿಲ್ಲ ಎನ್ನುವುದನ್ನು ತಿಳಿಯಬೇಕಾಗಿದೆ  

ಸುಖಾ ಸುಮ್ಮನೆ ನಮ್ಮ ಮೇಲೆ ನಾವೆ ಹಿಂದಿಯನ್ನು  ಹೇರಿಕೊಳ್ಳುವುದನ್ನು ನಾವು ನಿಲ್ಲಿಸಬೇಕು.  ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗೆಗೆ ಎಚ್ಚರ ವಹಿಸಿ ಸಲ್ಲದ ಹಿಂದಿ ಬಳಕೆಗೆ ಕಡಿವಾಣ ಹಾಕಬೇಕು.

ಕನ್ನಡ ಅಭಿವೃದ್ಢಿ ಪ್ರಾಧಿಕಾರದಿಂದ ಬಂದ ಉತ್ತರ:
********************************************************************

     ಸಂಖ್ಯೆ: ಕಅಪ್ರಾ:ಅ:     :೨೦೧೨-೧೩  
                                                                      ದಿನಾಂಕ: ೨೦-೦೬-೨೦೧೨
      ಮಾನ್ಯರೆ,

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಶಾಸ್ತ್ರೀಯ ಸ್ಥಾನಮಾನ ದೊರೆಕಿರುವ ಹಿನ್ನಲೆಯಲ್ಲಿ ಕನ್ನಡ ಭಾಷೆಯನ್ನು ಎಲ್ಲಾ ಹಂತದಲ್ಲೂ ಬಳಕೆ ಆಗಬೇಕೆನ್ನುವುದು ಸರ್ಕಾರದ ಆಶಯ ಹಾಗೂ ದಿಟ್ಟ ನಿಲುವು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡವನ್ನು ಬಳಸುತ್ತಿಲ್ಲ ಎನ್ನುವ ಬಗ್ಗೆ ಬಹಳಷ್ಟು ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ದಿನಾಂಕ ೨೯-೦೪-೨೦೦೯ರಿಂದಲೂ ಪತ್ರ ಬರೆಯುತ್ತಾಲೇ ಬಂದಿದ್ದೇನೆ.  ಆದರೂ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸದಿರುವುದು, ಕನ್ನಡ ಬಳಸಿರುವ ಕಡೆ ಪ್ರಾಮುಖ್ಯತೆ ನೀಡದಿರುವುದು ದುರದುಷ್ಟಕರ. ಬೇರೆ ದೇಶದ ವಿಮಾನ ನಿಲ್ದಾಣಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಪ್ರಾಧ್ಯಾನತೆ ನೀಡಿರುವ ಬಗ್ಗೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಗ್ಗೆ ರವಿಯವರ ಮನವಿಯನ್ನು ಲಗತ್ತಿಸಿದೆ. ಅಲ್ಲದೆ ವಿಮಾನ ನಿಲ್ದಾಣದ ಅಧಿಕಾರಿಗಳು ಕನ್ನಡವನ್ನು ಲಘುವಾಗಿ ಪರಿಗಣಿಸುತ್ತಿರುವ ಬಗ್ಗೆ ಜೂನ್ ೨೦, ೨೦೧೨ರ ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ವಾಚಕರ ವಿಜಯ ಅಂಕಣದಲ್ಲಿ ಪ್ರಕಟಗೊಂಡಿರುವ “ಕನ್ನಡ ಕಡೆಗಣನೆ” ಸುದ್ದಿಯ ತುಣುಕನ್ನು ಇದರೊಂದಿಗೆ ಲಗತ್ತಿಸಿದೆ.

     ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳ್ಳಿಸುವಲಿ, ವಿಮಾನ ನಿಲ್ದಾಣದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಕನ್ನಡ ನೆಲದ ಕಾನೂನಿಗೆ ಅಗೌರವ ತೋರುತ್ತಿರುವುದೇ ಅಲ್ಲದೆ, ಕನ್ನಡ ನಾಡಿನ ಜನರ ತೆರಿಗೆ ಹಣದಲ್ಲಿ ಜೀವನ ನಿರ್ವಹಿಸುತ್ತಿರುವ ಅಧಿಕಾರಿಗಳು ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನೋಭೂಮಿಕೆಯನ್ನು ಬೆಳಸಿಕೊಳ್ಳುವ ಮೂಲಕ ಉದ್ದಟತನ ಪ್ರದರ್ಶಿಸುತ್ತಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.
     ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರತಕ್ಕದು ಮತ್ತು ಭಾಷೆಗಳನ್ನು ಬಳಸುವ ಸಂದರ್ಭದಲ್ಲಿ ಕನ್ನಡ ಆವೃತ್ತಿಯ ಕೆಳಗೆಬರತಕ್ಕದು.  ಕನ್ನಡ ನಾಮಫಲಕವನ್ನು ಹೆಚ್ಚು ಎದ್ದುಕಾಣುವಂತೆ ಬರೆಸತಕ್ಕದು. ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿ ಅಂತರ್ಜಾಲತಾಣದಲ್ಲಿ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಬೇಕು. ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆಯ ಚೀಟಿಯನ್ನು ಆಂಗ್ಲಭಾಷೆಯ ಜೊತೆಗೆ ಕನ್ನಡವನ್ನು ಪ್ರಧಾನವಾಗಿ ಮುದ್ರಿಸುವುದು. ಅಲ್ಲದೆ ಇತರಭಾಷಾ ಪತ್ರಿಕೆಗಳ ಜೊತೆ ಕನ್ನಡ ಪತ್ರಿಕೆಗಳು ದೊರೆಯುವಂತೆ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ.  ತಾವು ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡುವುದು.
      ವಂದನೆಗಳೊಂದಿಗೆ,
                           ತಮ್ಮ ವಿಶ್ವಾಸಿ,
                                        -ಸಹಿ-
                                        (ಡಾ. ಮುಖ್ಯಮಂತ್ರಿ ಚಂದ್ರು)
ಶ್ರೀ ರಾಜ್‌ಕುಮಾರ್ ಖತ್ರಿ  ಭಾ.ಆ.ಸೇ.,
ಪ್ರಧಾನ ಕಾರ್ಯದರ್ಶಿಗಳು,
ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ,
ವಿಕಾಸಸೌಧ,
ಬೆಂಗಳೂರು
ಪ್ರತಿಯನ್ನು: ಶ್ರೀ ರವಿ, ಬೆಂಗಳೂರು ಇವರಮಾಹಿತಿಗಾಗಿ
********************************************************************

Wednesday, April 4, 2012

ಕನ್ನಡದಲ್ಲೂ ಮಾಹಿತಿ ಮುದ್ರಿತವಾಗಲಿ

ಇತ್ತೀಚಿಗೆ ಪೆಪ್ಸಿಕೋ ರವರ ಲೇಸ್ , ಮ್ಯಾಕ್ ಡೋನಾಲ್ದ್ ರವರ ಬರ್ಗರ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರವಾಗುವಂಥಹ ಕೊಬ್ಬಿನಂಶ ಹೆಚ್ಚಾಗಿ ಇದೆ ಅನ್ನೋದರ ಬಗ್ಗೆ ಸುದ್ದಿ ಪ್ರಚಾರದಲ್ಲಿದೆ. ತಯಾರಕರು ತಮ್ಮ ಉತ್ಪಾದನೆಗಳಲ್ಲಿ ಯಾವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿದೆ ಎಂದು ಗ್ರಾಹಕನಿಗೆ ಸರಿಯಾಗಿ ತಿಳಿಸುವುದು ಅವರ ಕರ್ತವ್ಯ. ಹಾಗೆಯೇ ಅದನ್ನು ಕೇಳಿ ಪಡೆಯುವುದೂ ಸಹ ಒಬ್ಬ ಗ್ರಾಹಕನಹಕ್ಕು ಆಗಿದೆ. Centre for Science and Environment (CSE) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ಆದರೆ ಇಂಥಹ ಚರ್ಚೆಗಳಲ್ಲಿ ಈ ಮಾಹಿತಿಯನ್ನು ಜನರು ಅರಿಯಬೇಕಾದರೆ ಅದು ಜನರ ಭಾಷೆಯಲ್ಲಿ ಇರಬೇಕು ಅನ್ನೋ ಅತಿ ಮುಖ್ಯವಾದ ಅಂಶವನ್ನು ಮರೆತ ಹಾಗಿದೆ. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ೭% ಜನರಿಗೆ ಮಾತ್ರ ಇಂಗ್ಲಿಷ್ ನಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಬಲ್ಲರು. ಮಿಕ್ಕ ೯೩% ಜನರಿಗೆ ಇಂಗ್ಲಿಷ್ ನಲ್ಲಿ ಮಾಹಿತಿ ತಲುಪಿಸಲಾಗದ ಪರಿಸ್ಥಿತಿ ಇರುವಾಗ , ಕೇವಲ ಇಂಗ್ಲಿಷ್ನಲ್ಲಿ ಮಾಹಿತಿಯನ್ನು ನಮೂದಿಸಿದರೆ ನಮ್ಮ ಜನರಿಗೆ ಹೇಗೆ ಅರ್ಥವಾದೀತು? ಒಬ್ಬ ಕನ್ನಡ ಮಾತ್ರ ಬರುವ ಗ್ರಾಹಕನೂ ಸಹ ಅಷ್ಟೇ ದುಡ್ಡು ಕೊಟ್ಟು ಖರೀದಿ ಮಾಡಿರುತ್ತಾನೆ. ಅವನಿಗೆ ಆ ಸಾಮಗ್ರಿಯ ಬಗೆಗೆ ಮಾಹಿತಿಯನ್ನು ತಿಳಿಸದಿರುವುದು ಯಾವ ನ್ಯಾಯ ?

ಗುಣಮಟ್ಟ,ಗರಿಷ್ಟ ಬೆಲೆ , ತೂಕಗಳ ಬಗೆಗೆ ಕನ್ನಡವೂ ಸೇರಿದಂತೆ ಆಯಾ ಪ್ರದೇಶದ ಸ್ಥಳೀಯ ಭಾಷೆಗಳಲ್ಲೂ ಸಹ ಮಾಹಿತಿಯನ್ನು ಮುದ್ರಿಸಬೇಕು. ಈ ಬಗೆಗೆ ಸರಿಯಾದ ಚರ್ಚೆಗಳಾಗಿ ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ತಿಳಿಸಲೇಬೇಕು ಅನ್ನುವಂಥಹ ನೀತಿ ನಿಯಮಗಳನ್ನು ರೂಪಿಸಬೇಕು.

Monday, March 12, 2012

ನಮ್ಮ ಮೇಟ್ರೋದಲ್ಲಿ ಇನ್ನೂ ಸಿಗದ ಕನ್ನಡ

ಕೆಲ ತಿಂಗಳ ಹಿಂದೆ "ನಮ್ಮ ಮೆಟ್ರೋ" ವಿನ ಅಧಿಕಾರಿಗಳು ದೈನಂದಿನ ಎಲ್ಲ ವ್ಯವಹಾರಗಳಲ್ಲಿ ಕನ್ನಡವನ್ನು ಬಳಕೆ ಮಾಡುವುದಾಗಿ ಹೇಳಿದ್ದರು. ಹಾಗೆಯೇ ಹೊರಗುತ್ತಿಗೆ ಕೊಟ್ಟಿರುವ ಸೆಕ್ಯೂರಿಟಿ ಗಾರ್ಡ್ ಎಜೆನ್ಸಿ ನವರಿಗೆ ಕನ್ನಡ ಓದಲು ಬರೆಯಲು ಬರುವವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ನಿಯಮ ಹಾಕಿದೀವಿ ಅಂತ ಸಹ ಹೇಳಿದ್ದರು. ಮೆಟ್ರೋ ಅಧಿಕಾರಿಗಳ ಹೇಳಿಕೆಗಳ ತುಣುಕು ಹೀಗಿದೆ. ಇವರು ಎಷ್ಟರ ಮಟ್ಟಿಗೆ ತಮ್ಮ ನಿಯಮಗಳನ್ನು ತಾವೇ ಪಾಲಿಸುತ್ತಾ ಇದಾರೆ ಅಂತ ನೋಡೋಣ.

ನೆನ್ನೆ ಮೇಟ್ರೋದಲ್ಲಿ ಒಮ್ಮೆ ಹೋಗಿ ಬರೋಣವೆಂದು ಮನೆ ಮಂದಿಯೆಲ್ಲ ಹೋಗಿದ್ದೆವು. ಮೆಟ್ರೋ ದಲ್ಲಿ ಈಗಲಾದರೂ ಕನ್ನಡ ಬಾರದ ಸೆಕ್ಯೂರಿಟಿ ಗಾರ್ಡ್ ಗಳಿಂದ ಮುಕ್ತಿ ಸಿಕ್ಕಿರಬಹುದೇನೋ ಅಂದುಕೊಂಡಿದ್ದೆ. ಆದರೆ ಬಯ್ಯಪ್ಪನಹಳ್ಳಿಯಲ್ಲಿ ಸಿಕ್ಕ ಮೊದಲ ಸೆಕ್ಯೂರಿಟಿ ಗಾರ್ಡ್ ಹಿಂದಿಯಲ್ಲಿ ಮಾತಾಡಿಸಲು ಶುರು ಮಾಡಿದ. ಕನ್ನಡದಲ್ಲಿ ಮಾತಾಡಿಸಿದಾಗ ಕನ್ನಡ ತನಗೆ ಗೊತ್ತಿಲ್ಲವೆಂದು ಉತ್ತರ ಕೊಟ್ಟ. ಕೆಲ ದಿನಗಳ ಹಿಂದೆ ಇದೆ ರೀತಿಯ ಧೋರಣೆಯ ಉತ್ತರವನ್ನು ಮೆಟ್ರೋ ಸೆಕ್ಯೂರಿಟಿ ಗಾರ್ಡ್ ಗಳು ಖಾಸಗಿ ಕನ್ನಡ ವಾಹಿನಿಗಳಿಗೆ ಕೊಟ್ಟಿದ್ದನ್ನು ಇಲ್ಲಿ ನೆನೆಯಬಹುದು.

ಇದನ್ನು ನೋಡಿದರೆ ಗಾರ್ಡ್ ವೆಲ್ ಸೆಕ್ಯೂರಿಟಿ ಎಜೆನ್ಸಿ ಗೆ ಕನ್ನಡ ಬರುವವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಅಂತ ಶರತ್ತನ್ನು ನಿಜವಾಗಲೂ ವಿಧಿಸಿದ್ದಾರ ಅಂತ ಅನುಮಾನ ಬರುತ್ತದೆ.ದಿನಕ್ಕೆ ಸಾವಿರಾರು ಜನರನ್ನು ತಪಾಸಣೆ ಮಾಡುವ ಇವರಿಗೆ ಕನ್ನಡವೇ ಗೊತ್ತಿರದಿದ್ದರೆ ಹೇಗೆ? ಬೆಂಗಳೂರಿನ ಮೆಟ್ರೋ ಸ್ಟೇಷನ್ ಒಳಗೆ ಹಿಂದಿ ಕಲಿತೆ ಕಾಲಿಡಬೇಕು ಎಂದರೆ ಹೇಗೆ?

ಸೆಕ್ಯೂರಿಟಿ ಗಾರ್ಡ್ ಗಳ ಅವಸ್ಥೆ ಹೀಗೆ . ಇನ್ನು ಪಾಸುಗಳಲ್ಲಿ ಎಷ್ಟು ಹಣ ಬಾಕಿ ಉಳಿದಿದೆ ಅಂತ ನೋಡೋಕೆ ಹೋದೆ. ಆ ಮಷಿನ್ ಬಳಿ ನನ್ನ ಮೆಟ್ರೋ ಕಾರ್ಡ್ ಅನ್ನು ತೋರಿಸಿದಾಗ ನನಗೆ ಅಚ್ಚರಿ ಕಾಡಿತ್ತು. ಎಲ್ಲವೂ ಹಿಂದಿ ಮಯ. ಮೆಟ್ರೋ ಬಳಸೋರು ಕೇವಲ ಹಿಂದಿ ಬಲ್ಲವರು ಮಾತ್ರ ಎಂದು ಇವರು ನಂಬಿದ ಹಾಗೆ ಇದೆ.
ನಮ್ಮ ಎಲ್ಲ ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನೇ ಬಳಸುತ್ತೇವೆ ಅಂತ ಹೇಳಿರುವುದು ಬರಿ ಸುಳ್ಳಿನ ಕಂತೆಯಷ್ಟೇ. ಬೆಂಗಳೂರಿನ ನಮ್ಮಮೆಟ್ರೋ ದಲ್ಲಿ ಎಲ್ಲ ಸೇವೆಗಳನ್ನು ಕನ್ನಡದಲ್ಲಿ ಕೊಡುವುದರ ಮಹತ್ತ್ವವನ್ನು ಇನ್ನಾದರೂ ಅರಿತು ಜವಾಬ್ದಾರಿಯಿಂದ ನಡೆಯಲಿ ಎಂದು ಇವರಿಗೆ ತಿಳಿಸೋಣ. ಈ ಬಗ್ಗೆ ಮೆಟ್ರೋ ಅಧಿಕಾರಿಗಳಿಗೆ ಈ ವಿಳಾಸಕ್ಕೆ ದೂರು ಕೊಡಬಹುದು bmrcl@dataone.in.