ಇತ್ತೀಚೆಗೆ ಗಳೆಯರೊಬ್ಬರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಸರಿಯಾದ ಪ್ರಾಮುಖ್ಯತೆ ಕೊಡದೆ ಇರುವ ಬಗೆಗೆ ದೂರು ಕೊಟ್ಟಿದ್ದರು. ಅಲ್ಲಿನ ಅಧಿಕಾರಿಗಳು ಪ್ರಾಮುಖ್ಯತೆ ಯಾಕೆ ಕೊಡಲಾಗಿಲ್ಲ ಅನ್ನುವುದಕ್ಕೆ ಹೀಗೆ ಸಮರ್ಥಿಸಿಕೊಂಡಿದ್ದರು
ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆ ಮಾತಾಡುವ ಜನರಿದ್ದಾಗ ಕನ್ನಡಕ್ಕ ಪ್ರಾಮುಖ್ಯತೆ ಕೊಡೋದು ಸರಿಯೆ?
ಹೌದು. ಬೆಂಗಳೂರಿನಲ್ಲಿ ತಮಿಳು,ತೆಲುಗು, ಹಿಂದಿ ಹೀಗೆ ಬೇರೆ ಭಾಷೆ ಮಾತಾಡೋರು ಇದಾರೆ. ಹಾಗಂತ ಕರ್ನಾಟಕದಲ್ಲಿ ಪ್ರಾಮುಖ್ಯತೆ ಕೊಡಬಾರದು ಅಂತೇನಿಲ್ಲ. ತಮ್ಮ ತಮ್ಮ ಭಾಷೆಗಳನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಕಾಪಾಡಿಕೊಳ್ಳಲಿ ಎಂದೆ ನಮ್ಮ ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ಬಿಡಿಸಿರುವುದು.
ಸಂವಿಧಾನದ ಆಶಯದಂತೆ "ವೈವಿಧ್ಯತೆಯಲ್ಲಿ ಏಕತೆ" ಯನ್ನು ಎತ್ತಿ ಹಿಡಿಯಬೇಕಾದರೆ, ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲೇ ಬೇಕು. ನಮ್ಮತನವನ್ನು ಎತ್ತಿ ಹಿಡಿಯಲು ಹೆಮ್ಮೆ ಪಡುವ ಬದಲು ನಾಚಿಕೆ ಪಡುತ್ತಿರುವುದು ವಿಪರ್ಯಾಸವೆ ಸರಿ.
ಇಂಗ್ಲೀಷ್ ಹಿಂದಿ ಜೊತೆಗೆ ಚಿಕ್ಕದಾಗಿ ಕನ್ನಡದಲ್ಲಿ ಹಾಕಿದೆ ಸಾಕಲ್ಲ್ವ?
ಕನ್ನಡ ನೆಲದಲ್ಲಿ ಕಟ್ಟಿರುವ ವಿಮಾನ ನಿಲ್ದಾಣದಲ್ಲಿ ಮೊದಲ ಆದ್ಯತೆ ಕೊಡಬೇಕಾದದ್ದು ಕನ್ನಡಕ್ಕೆ ಹೊರತು ಬೇರೆ ಭಾಷೆಗೆ ಅಲ್ಲ. "ಇತರರೂ" ಬಳಸುವುದರಿಂದ ಇಂಗ್ಲೀಷ್ ಅಲ್ಲಿ ಸಹ ಹಾಕುವುದು ಸರಿಯಾದ ಬಗೆ. ಸಲ್ಲದ ಹಿಂದಿಯ ಬಳಕೆಯನ್ನು ಸಹ ನಿಲ್ಲಿಸಬೇಕು.
ಆದರೆ ಇಲ್ಲಿ ಮೊದಲನೆಯದಾಗಿ ಹಿಂದಿ, ಇಂಗ್ಲೀಷ್ ನಲ್ಲಿ ಹಾಕಬೇಕು, ನಂತರ ಕನ್ನಡದಲ್ಲಿ ಹಾಕುವುದರ ಬಗೆಗೆ ಯೋಚಿಸಬಹುದು ಅನ್ನುವ ಮನಸ್ಥಿತಿ ಎದ್ದು ಕಾಣುತ್ತದೆ. ಇಲ್ಲಿ ಕನ್ನಡಿಗರೇ "ಇತರರಾಗಿ" ಇವರ ಕಣ್ಣಿಗೆ ಕಾಣುತ್ತಾರೋ ಏನೋ.
ಈಗಿರುವಂತೆಯೆ ವಿಮಾನ ನಿಲ್ದಾಣಕ್ಕೆ ಬಹಳಶ್ಟು ಮೆಚ್ಚುಗೆ ವ್ಯಕ್ತವಾಗಿದೆಯಲ್ಲಾ, ಮತ್ತೇನು?
ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಛೀ ಮಾರಿ ಹಾಕಿ, ಕನ್ನಡಕ್ಕೆ ಪ್ರಾಶಸ್ತ್ಯ ಕೊಡಬೇಕು ಅಂತ ಆಗ್ರಹಿಸಿದೆ. ಬಹಳ ಜನರು ಈ ಬಗೆಗೆ ದೂರು ಕೊಟ್ಟಿದಾರೆ ಅಂತ ಪ್ರಾಧಿಕಾರ ಬರೆದಿರುವ ಪತ್ರದಲ್ಲಿ ನೋಡಬಹುದು. ಈ ವಿಷಯವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ದೂರು ಕೊಟ್ಟು ಮೂರು ವರುಷವಾಗಿದೆ, ಆದರೂ ಈ ಬಗೆಗೆ ಏನೂ ಮಾಡಿಲ್ಲ ಎಂದು ಸಹ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಅಂಗವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆದೇಶವನ್ನೇ ಗಾಳಿಗೆ ತೂರಿದ BIAL ಗೆ ಕರ್ನಾಟಕದ ಯಾವ ಕಾನೂನು ತಮಗೆ ಅನ್ವಯವಾಗುವುದಿಲ್ಲ ಎಂಬ ಧೋರಣೆ ಇದ್ದಂತೆ ತೋರುತ್ತದೆ,
ಇಲ್ಲಿ ತಂತ್ರಗಾರಿಕೆಯ ಬಗೆಗೆ ಎರಡನೆ ಮಾತಿಲ್ಲ. ಅಚ್ಚು ಕಟ್ಟಾಗಿದೆ. ಆದರೆ ಇಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗದೆ ಯಾರೊ ನಾಲ್ಕು ಜನ ಹೊರಗಿನವರು ಬಂದು ಹೊಗಳಿದ್ದಕ್ಕೆಸಂತೋಷ ಪಟ್ಟರೆ ಹೇಗೆ? BIAL ನಮ್ಮ ನಾಡಿನಲ್ಲಿ "ಮನೆಗೆ ಮಾರಿ ಊರಿಗೆ ಉಪಕಾರಿ" ಆದಂತಿದೆ.
ಕನ್ನಡದ ಕಡೆಗಣನೆ ಬಗೆಗೆ ದನಿಯೆತ್ತೋಣ
ಈ ಬಗೆಯ ಕನ್ನಡದ ಕಡೆಗಣನೆ ಬಗೆಗೆ ನಾವೆಲ್ಲರೂ ಸೇರಿ ದನಿಯೆತ್ತಬೇಕು. ಒಂದು ವಿಮಾನ ನಿಲ್ದಾಣ ಆ ನಗರದ ಸೊಗಡನ್ನು ಹೊರಗಿನ ಪ್ರಪಂಚಕ್ಕೆ ಪಸರಿಸುವಂತಿರಬೇಕು. ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣ ಇಲ್ಲಿಯ ಭಾಷೆ ಸಂಸ್ಕೃತಿಯ ಪ್ರತೀಕವಾಗಬೇಕು.
BIAL ಗೆ ದೂರು ಇಲ್ಲಿ ಬರೆಯಿರಿ feedback@bialairport.com
- ಸಮೀಕ್ಷೆಯ ಪ್ರಕಾರ ಇಂಗ್ಲೀಷ್ ಭಾಷೆ ಓಡಾಡುಗರಲ್ಲ್ಲಿ ಅತಿ ಹೆಚ್ಚು ಜನರಿಗೆ ಬರುವ ಭಾಷೆಯಾಗಿದೆ. ಸೂಚನಾ ಫಲಕಗಳನ್ನು ಜನರಿಗೆ ಸುಲಭವಾಗಿ ಹೆಚ್ಚು ಜನರಿಗೆ ಅರ್ಥವಾಗುವಂತೆ ಇಂಗ್ಲೀಷ್ ಗೆ ಪ್ರಾಮುಖ್ಯತೆ ಕೊಡಲಾಗಿದೆ. ಇದು "world class design" ಅಂತ ಸಹ ಹೇಳಿದಾರೆ.
- ನಮ್ಮ ದೇಶ ಹಲವಾರು ಭಾಷಿಗರನ್ನು ಕೂಡಿರುವುದರಿಂದ ಜಪಾನ್, ಜರ್ಮನಿ ಮೊದಲಾದ ಒಂದೇ ಭಾಷೆಯನ್ನಾಡುವ ದೇಶಗಳಲ್ಲಿ ಆ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವಂತೆ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಲಾಗುವುದಿಲ್ಲ
- ಸ್ಥಳೀಯ ಜನರ ಅನುಕೂಲಕ್ಕಾಗಿ ಹಿಂದಿ ಹಾಗೂ ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ಸಹ ಹಾಕಿದ್ದೀವಿ
- ಈಗಿರುವಂತೆಯೆ ವಿಮಾನ ನಿಲ್ದಾಣಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ
ಅರೆರೆ, ಎಲ್ಲ ಸರಿಯಾಗೆ ಇದೆಯಲ್ಲ ಮತ್ತೆ ಕ್ಯಾತೆ ಯಾಕೆ ಅಂತೀರ? ಇವರ ಉತ್ತರದಲ್ಲಿ ಜೊಳ್ಳು ಎಷ್ಟು ಕಾಳು ಎಷ್ಟು ಅಂತ ನೋಡೋಣ ಬನ್ನಿ
ಕನ್ನಡಕ್ಕೆ ಪ್ರಾಮುಖ್ಯತೆ ಕೊಟ್ಟರೆ ಅದು "World class design" ಆಗಲ್ಲ್ವ?
ಬಹಳಷ್ಟು ಕಡೆ ಈ ವಿಷಯವಾಗಿ ಚರ್ಚೆ ಮಾಡುವಾಗ ಹೆಚ್ಚಾಗಿ ಕನ್ನಡಿಗರಿಂದಲೇ ಬರುವ ಪ್ರತಿಕ್ರಿಯೆ ಏನೆಂದರೆ "ಅದು
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಅಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಲು ಹೇಗೆ ಸಾಧ್ಯ " ಎಂದು. ನಾನು ನೋಡಿರುವ ಬೇರೆ ದೇಶಗಳ ವಿಮಾನ ನಿಲ್ದಾಣಗಳ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದೀನಿ. ತಮ್ಮ ತಮ್ಮ ಭಾಷಗಳಿಗೆ ಪ್ರಾಮುಖ್ಯತೆ ಕೊಟ್ಟು ದೇಶ ವಿದೇಶದ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿವೆ.
ಇದು ಬ್ಯಾಂಗ್ಕಾಕ್ ವಿಮಾನ ನಿಲ್ದಾಣದಲ್ಲಿ ತೆಗೆದದ್ದು. ಅವರ ತಾಯಿ ನುಡಿ "ತಾಯ್" ಭಾಶೆಗೆ ಕೊತ್ತಿರುವ ಪ್ರಾಮುಖ್ಯತೆ ಎದ್ದು ಕಾಣುತ್ತದೆ. ವಿಮಾನಗಳ ಬರುವಿಕೆ/ಹಾರುವಿಕೆ ಬಗೆಗೆ ತಿಳಿಸುವ Electronic Display ಗಳಲ್ಲಿ ಸಹ ಅವರ ಭಾಷೆ ರಾರಾಜಿಸುತ್ತಿದೆ.
ಇದು ಬ್ಯಾಂಗ್ಕಾಕ್ ವಿಮಾನ ನಿಲ್ದಾಣದಲ್ಲಿ ತೆಗೆದದ್ದು. ಅವರ ತಾಯಿ ನುಡಿ "ತಾಯ್" ಭಾಶೆಗೆ ಕೊತ್ತಿರುವ ಪ್ರಾಮುಖ್ಯತೆ ಎದ್ದು ಕಾಣುತ್ತದೆ. ವಿಮಾನಗಳ ಬರುವಿಕೆ/ಹಾರುವಿಕೆ ಬಗೆಗೆ ತಿಳಿಸುವ Electronic Display ಗಳಲ್ಲಿ ಸಹ ಅವರ ಭಾಷೆ ರಾರಾಜಿಸುತ್ತಿದೆ.
ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆ ಮಾತಾಡುವ ಜನರಿದ್ದಾಗ ಕನ್ನಡಕ್ಕ ಪ್ರಾಮುಖ್ಯತೆ ಕೊಡೋದು ಸರಿಯೆ?
ಹೌದು. ಬೆಂಗಳೂರಿನಲ್ಲಿ ತಮಿಳು,ತೆಲುಗು, ಹಿಂದಿ ಹೀಗೆ ಬೇರೆ ಭಾಷೆ ಮಾತಾಡೋರು ಇದಾರೆ. ಹಾಗಂತ ಕರ್ನಾಟಕದಲ್ಲಿ ಪ್ರಾಮುಖ್ಯತೆ ಕೊಡಬಾರದು ಅಂತೇನಿಲ್ಲ. ತಮ್ಮ ತಮ್ಮ ಭಾಷೆಗಳನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಕಾಪಾಡಿಕೊಳ್ಳಲಿ ಎಂದೆ ನಮ್ಮ ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ಬಿಡಿಸಿರುವುದು.
ಸಂವಿಧಾನದ ಆಶಯದಂತೆ "ವೈವಿಧ್ಯತೆಯಲ್ಲಿ ಏಕತೆ" ಯನ್ನು ಎತ್ತಿ ಹಿಡಿಯಬೇಕಾದರೆ, ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲೇ ಬೇಕು. ನಮ್ಮತನವನ್ನು ಎತ್ತಿ ಹಿಡಿಯಲು ಹೆಮ್ಮೆ ಪಡುವ ಬದಲು ನಾಚಿಕೆ ಪಡುತ್ತಿರುವುದು ವಿಪರ್ಯಾಸವೆ ಸರಿ.
ಇಂಗ್ಲೀಷ್ ಹಿಂದಿ ಜೊತೆಗೆ ಚಿಕ್ಕದಾಗಿ ಕನ್ನಡದಲ್ಲಿ ಹಾಕಿದೆ ಸಾಕಲ್ಲ್ವ?
ಕನ್ನಡ ನೆಲದಲ್ಲಿ ಕಟ್ಟಿರುವ ವಿಮಾನ ನಿಲ್ದಾಣದಲ್ಲಿ ಮೊದಲ ಆದ್ಯತೆ ಕೊಡಬೇಕಾದದ್ದು ಕನ್ನಡಕ್ಕೆ ಹೊರತು ಬೇರೆ ಭಾಷೆಗೆ ಅಲ್ಲ. "ಇತರರೂ" ಬಳಸುವುದರಿಂದ ಇಂಗ್ಲೀಷ್ ಅಲ್ಲಿ ಸಹ ಹಾಕುವುದು ಸರಿಯಾದ ಬಗೆ. ಸಲ್ಲದ ಹಿಂದಿಯ ಬಳಕೆಯನ್ನು ಸಹ ನಿಲ್ಲಿಸಬೇಕು.
ಆದರೆ ಇಲ್ಲಿ ಮೊದಲನೆಯದಾಗಿ ಹಿಂದಿ, ಇಂಗ್ಲೀಷ್ ನಲ್ಲಿ ಹಾಕಬೇಕು, ನಂತರ ಕನ್ನಡದಲ್ಲಿ ಹಾಕುವುದರ ಬಗೆಗೆ ಯೋಚಿಸಬಹುದು ಅನ್ನುವ ಮನಸ್ಥಿತಿ ಎದ್ದು ಕಾಣುತ್ತದೆ. ಇಲ್ಲಿ ಕನ್ನಡಿಗರೇ "ಇತರರಾಗಿ" ಇವರ ಕಣ್ಣಿಗೆ ಕಾಣುತ್ತಾರೋ ಏನೋ.
ಈಗಿರುವಂತೆಯೆ ವಿಮಾನ ನಿಲ್ದಾಣಕ್ಕೆ ಬಹಳಶ್ಟು ಮೆಚ್ಚುಗೆ ವ್ಯಕ್ತವಾಗಿದೆಯಲ್ಲಾ, ಮತ್ತೇನು?
ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಛೀ ಮಾರಿ ಹಾಕಿ, ಕನ್ನಡಕ್ಕೆ ಪ್ರಾಶಸ್ತ್ಯ ಕೊಡಬೇಕು ಅಂತ ಆಗ್ರಹಿಸಿದೆ. ಬಹಳ ಜನರು ಈ ಬಗೆಗೆ ದೂರು ಕೊಟ್ಟಿದಾರೆ ಅಂತ ಪ್ರಾಧಿಕಾರ ಬರೆದಿರುವ ಪತ್ರದಲ್ಲಿ ನೋಡಬಹುದು. ಈ ವಿಷಯವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ದೂರು ಕೊಟ್ಟು ಮೂರು ವರುಷವಾಗಿದೆ, ಆದರೂ ಈ ಬಗೆಗೆ ಏನೂ ಮಾಡಿಲ್ಲ ಎಂದು ಸಹ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಅಂಗವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆದೇಶವನ್ನೇ ಗಾಳಿಗೆ ತೂರಿದ BIAL ಗೆ ಕರ್ನಾಟಕದ ಯಾವ ಕಾನೂನು ತಮಗೆ ಅನ್ವಯವಾಗುವುದಿಲ್ಲ ಎಂಬ ಧೋರಣೆ ಇದ್ದಂತೆ ತೋರುತ್ತದೆ,
ಇಲ್ಲಿ ತಂತ್ರಗಾರಿಕೆಯ ಬಗೆಗೆ ಎರಡನೆ ಮಾತಿಲ್ಲ. ಅಚ್ಚು ಕಟ್ಟಾಗಿದೆ. ಆದರೆ ಇಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗದೆ ಯಾರೊ ನಾಲ್ಕು ಜನ ಹೊರಗಿನವರು ಬಂದು ಹೊಗಳಿದ್ದಕ್ಕೆಸಂತೋಷ ಪಟ್ಟರೆ ಹೇಗೆ? BIAL ನಮ್ಮ ನಾಡಿನಲ್ಲಿ "ಮನೆಗೆ ಮಾರಿ ಊರಿಗೆ ಉಪಕಾರಿ" ಆದಂತಿದೆ.
ಕನ್ನಡದ ಕಡೆಗಣನೆ ಬಗೆಗೆ ದನಿಯೆತ್ತೋಣ
ಈ ಬಗೆಯ ಕನ್ನಡದ ಕಡೆಗಣನೆ ಬಗೆಗೆ ನಾವೆಲ್ಲರೂ ಸೇರಿ ದನಿಯೆತ್ತಬೇಕು. ಒಂದು ವಿಮಾನ ನಿಲ್ದಾಣ ಆ ನಗರದ ಸೊಗಡನ್ನು ಹೊರಗಿನ ಪ್ರಪಂಚಕ್ಕೆ ಪಸರಿಸುವಂತಿರಬೇಕು. ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣ ಇಲ್ಲಿಯ ಭಾಷೆ ಸಂಸ್ಕೃತಿಯ ಪ್ರತೀಕವಾಗಬೇಕು.
BIAL ಗೆ ದೂರು ಇಲ್ಲಿ ಬರೆಯಿರಿ feedback@bialairport.com
ಕನ್ನಡವನ್ನು ತೀರಾ ಸರ್ಕಾರವೇ ಕಡೆಗಣಿಸಲು ಆರಂಭಿಸಿದರೆ, ಭಾಷೆಯ ಉಳಿವು ಸಾಧ್ಯವೇ.
ReplyDeleteಇದನ್ನು ಕನ್ನಡ ಪರ ಸಂಘಟನೆಗಳು ಮತ್ತು ಸಾರ್ವಜನಿಕರೂ ತೀವ್ರವಾಗಿ ವಿರೋಧಿಸಬೇಕು.
ಮಿತ್ರರೇ, ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ,
ReplyDeleteಪರಭಾಷಾ ಹೇರಿಕೆಯನ್ನು ಮೊದಲು ನಿಲ್ಲಿಸಬೇಕು... ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ.
ಕರ್ನಾಟಕದಲ್ಲೇ ಇದ್ದರೂ ಪರರಾಜ್ಯದಲ್ಲಿ ಇದ್ದಂತೆ ಅನಿಸುತದೆ :(
ReplyDelete