ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಾನು ಬರೆದ ದೂರು ಹೀಗಿದೆ .
--
****************************** **************************************
ಮಾನ್ಯ ಮುಖ್ಯಮಂತ್ರಿಗಳೇ,
ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಆಗುತ್ತಿರುವುದರ ಬಗೆಗೆ ನಾನು ಬರೆದ ದೂರನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಎಲ್ಲ ಅಂತಾರಾಷ್ಟೀಯ ವಿಮಾನ ನಿಲ್ದಾಣಗಳಲ್ಲಿ ಆಯಾ ಜಾಗದ ಸೊಗಡನ್ನು ಆಯಾ ಜಾಗದ ಭಾಷೆಯನ್ನೂ ಹೊರಗಿನಿಂದ ಬಂದವರಿಗೆ ಮನ ಮುಟ್ಟುವಂತೆ ತೋರ್ಪಡಿಸಲಾಗಿದೆ. ಇಲ್ಲಿ bangkok, Beijing ನ ವಿಮಾನ ನಿಲ್ದಾಣದ ಚಿತ್ರಗಳನ್ನು ಲಗತ್ತಿಸಿದ್ದೇನೆ.
ಆದರೆ BIAL ನಲ್ಲಿ ಕನ್ನಡವನ್ನು ಕಾಟಾಚಾರಕ್ಕೆ ಬಳಸಿದಂತೆ ಇದೆ. ಭೂತಗನ್ನಡಿ ಹಿಡಿದು ಕನ್ನಡದ ಅಕ್ಷರಗಳನ್ನು ಹುಡುಕಬೇಕು. ಹೆಚ್ಚಾಗಿ ಇಂಗ್ಲಿಷ್ ದಿನಪತ್ರಿಕೆಗಳನ್ನು ಇತ್ತು ಕಾಟಾಚಾರಕ್ಕೆ ಎಲ್ಲೋ ಒಂದು ಮೂಲೆಯಲ್ಲಿ ಕನ್ನಡದ ಒಂದೇ ಒಂದು ದಿನ ಪತ್ರಿಕೆಯನ್ನು ಇಡಲಾಗಿದೆ. ವಿಮಾನ ನಿಲ್ದಾಣದ ಮಿಮ್ಬಲೆಯಲ್ಲಿ ಹುಡುಕಿದರೂ ಒಂದೇ ಒಂದು ಅಕ್ಷರ ಕನ್ನಡದ ಅಕ್ಷರ ಕಾಣಿಸಲ್ಲ. ಪಾರ್ಕಿಂಗ್ ಮಾಡಿದಾಗ ಕೊಡುವ ಚೀಟಿಯಲ್ಲಿ ಸಹ ಕನ್ನಡ ಇಲ್ಲ.
ಈ ರೀತಿ ಕನ್ನಡದ ನೆಲದಲ್ಲಿರುವ , ಕನ್ನಡ ಜನರ ತೆರಿಗೆ ಹಣದಿಂದ ಕಟ್ಟಲಾಗಿರುವ, ಕನ್ನಡಿಗರಿಗೆ ಉಪಯೋಗವಾಗಲಿ ಎಂದು ಕರ್ನಾಟಕ ಸರ್ಕಾರ ಕಟ್ಟಿಸಿದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಆಗುತ್ತಿರುವುದು ವಿಪರ್ಯಾಸವೇ ಸರಿ. ಕನ್ನಡಿಗ ತನ್ನ ನಾಡಿನಲ್ಲೇ ಎರಡನೇ ದರ್ಜೆಯ ಪ್ರಜೆಯಂತೆ ಬದುಕುವ ಹೀನ ಪರಿಸ್ಥಿತಿ ಉಂಟಾಗಿದೆ.
ಈ ರೀತಿ ಕರ್ನಾಟಕದ ಭಾಷಾ ನೀತಿಯನ್ನು ಮೀರಿ ಹೊರಗಿನ ಜನರಿಗೆ ಮಣೆ ಹಾಕುತ್ತಿರುವ BIAL ಗೆ ಕನ್ನಡದ ಕಡೆಗಣನೆ ಮಾಡುವುದನ್ನು ನಿಲ್ಲಿಸಿ ಕನ್ನಡಕ್ಕೆ ಸರಿಯಾದ ಸ್ಥಾನ ಮಾನ ಕೊಡಲು ನಿರ್ದೇಶಿಸಬೇಕೆಂದು ನನ್ನ ಮನವಿ.
--
ರವಿ
****************************** **************************************
ಒಳ್ಳೇ ಕೆಲಸ ಮಾಡಿದಿರಿ
ReplyDeleteಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ,
ReplyDeleteಪರಭಾಷಾ ಹೇರಿಕೆಯನ್ನು ಮೊದಲು ನಿಲ್ಲಿಸಬೇಕು... ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ.