Friday, June 22, 2012

ತ್ರಿಭಾಷಾ ಸೂತ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೇಗೆ ಅನ್ವಯ ಆಗುತ್ತದೆ?

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದರ ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಹ ಕಳಿಸಿದ್ದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತರ  ಸಹ ಬಂತು. 

ಅಭಿವ್ರುದ್ಧಿ  ಪ್ರಾಧಿಕಾರವು ಇದರ ಬಗ್ಗೆ ಗಮನಹರಿಸಿ ಪತ್ರ ಬರೆದಿರುವುದು ನಿಜಕ್ಕು ಸಂತೋಷದ ವಿಚಾರ. ಆದರೆ ಪ್ರಾಧಿಕಾರವು ತ್ರಿಭಾಷಾ ಸೂತ್ರದ ಬಳಕೆಯ ಬಗೆಗಿನ ಅರಿವು ಸರಿಯಿಲ್ಲದ್ದಾಗಿದೆ. ತ್ರಿಭಾಷ ಸೂತ್ರ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆ. ಬೆಂಗಳೂರಿನ ವಿಮಾನ ನಿಲ್ದಾಣ ಕೇಂದ್ರ ಸರಕಾರಿ ಕಚೇರಿಯಲ್ಲದ್ದರಿಂದ  ತ್ರಿಭಾಷ ಸೂತ್ರ ಅನ್ವಯವಾಗುವುದಿಲ್ಲ ಎನ್ನುವುದನ್ನು ತಿಳಿಯಬೇಕಾಗಿದೆ  

ಸುಖಾ ಸುಮ್ಮನೆ ನಮ್ಮ ಮೇಲೆ ನಾವೆ ಹಿಂದಿಯನ್ನು  ಹೇರಿಕೊಳ್ಳುವುದನ್ನು ನಾವು ನಿಲ್ಲಿಸಬೇಕು.  ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗೆಗೆ ಎಚ್ಚರ ವಹಿಸಿ ಸಲ್ಲದ ಹಿಂದಿ ಹೇರಿಕೆಗೆ ಕಡಿವಾಣ ಹಾಕಬೇಕು.

ಕನ್ನಡ ಅಭಿವೃದ್ಢಿ ಪ್ರಾಧಿಕಾರದಿಂದ ಬಂದ ಉತ್ತರ ಹೀಗಿದೆ:
********************************************************************

     ಸಂಖ್ಯೆ: ಕಅಪ್ರಾ:ಅ:     :೨೦೧೨-೧೩   
                                                                      ದಿನಾಂಕ: ೨೦-೦೬-೨೦೧೨
      ಮಾನ್ಯರೆ,

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಶಾಸ್ತ್ರೀಯ ಸ್ಥಾನಮಾನ ದೊರೆಕಿರುವ ಹಿನ್ನಲೆಯಲ್ಲಿ ಕನ್ನಡ ಭಾಷೆಯನ್ನು ಎಲ್ಲಾ ಹಂತದಲ್ಲೂ ಬಳಕೆ ಆಗಬೇಕೆನ್ನುವುದು ಸರ್ಕಾರದ ಆಶಯ ಹಾಗೂ ದಿಟ್ಟ ನಿಲುವು. 
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡವನ್ನು ಬಳಸುತ್ತಿಲ್ಲ ಎನ್ನುವ ಬಗ್ಗೆ ಬಹಳಷ್ಟು ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ದಿನಾಂಕ ೨೯-೦೪-೨೦೦೯ರಿಂದಲೂ ಪತ್ರ ಬರೆಯುತ್ತಾಲೇ ಬಂದಿದ್ದೇನೆ.  ಆದರೂ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸದಿರುವುದು, ಕನ್ನಡ ಬಳಸಿರುವ ಕಡೆ ಪ್ರಾಮುಖ್ಯತೆ ನೀಡದಿರುವುದು ದುರದುಷ್ಟಕರ. ಬೇರೆ ದೇಶದ ವಿಮಾನ ನಿಲ್ದಾಣಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಪ್ರಾಧ್ಯಾನತೆ ನೀಡಿರುವ ಬಗ್ಗೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಗ್ಗೆ ರವಿಯವರ ಮನವಿಯನ್ನು ಲಗತ್ತಿಸಿದೆ. ಅಲ್ಲದೆ ವಿಮಾನ ನಿಲ್ದಾಣದ ಅಧಿಕಾರಿಗಳು ಕನ್ನಡವನ್ನು ಲಘುವಾಗಿ ಪರಿಗಣಿಸುತ್ತಿರುವ ಬಗ್ಗೆ ಜೂನ್ ೨೦, ೨೦೧೨ರ ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ವಾಚಕರ ವಿಜಯ ಅಂಕಣದಲ್ಲಿ ಪ್ರಕಟಗೊಂಡಿರುವ “ಕನ್ನಡ ಕಡೆಗಣನೆ” ಸುದ್ದಿಯ ತುಣುಕನ್ನು ಇದರೊಂದಿಗೆ ಲಗತ್ತಿಸಿದೆ.

     ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳ್ಳಿಸುವಲಿ, ವಿಮಾನ ನಿಲ್ದಾಣದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಕನ್ನಡ ನೆಲದ ಕಾನೂನಿಗೆ ಅಗೌರವ ತೋರುತ್ತಿರುವುದೇ ಅಲ್ಲದೆ, ಕನ್ನಡ ನಾಡಿನ ಜನರ ತೆರಿಗೆ ಹಣದಲ್ಲಿ ಜೀವನ ನಿರ್ವಹಿಸುತ್ತಿರುವ ಅಧಿಕಾರಿಗಳು ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನೋಭೂಮಿಕೆಯನ್ನು ಬೆಳಸಿಕೊಳ್ಳುವ ಮೂಲಕ ಉದ್ದಟತನ ಪ್ರದರ್ಶಿಸುತ್ತಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.

     ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರತಕ್ಕದು ಮತ್ತು ಭಾಷೆಗಳನ್ನು ಬಳಸುವ ಸಂದರ್ಭದಲ್ಲಿ ಕನ್ನಡ ಆವೃತ್ತಿಯ ಕೆಳಗೆಬರತಕ್ಕದು.  ಕನ್ನಡ ನಾಮಫಲಕವನ್ನು ಹೆಚ್ಚು ಎದ್ದುಕಾಣುವಂತೆ ಬರೆಸತಕ್ಕದು. ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿ ಅಂತರ್ಜಾಲತಾಣದಲ್ಲಿ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಬೇಕು. ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆಯ ಚೀಟಿಯನ್ನು ಆಂಗ್ಲಭಾಷೆಯ ಜೊತೆಗೆ ಕನ್ನಡವನ್ನು ಪ್ರಧಾನವಾಗಿ ಮುದ್ರಿಸುವುದು. ಅಲ್ಲದೆ ಇತರಭಾಷಾ ಪತ್ರಿಕೆಗಳ ಜೊತೆ ಕನ್ನಡ ಪತ್ರಿಕೆಗಳು ದೊರೆಯುವಂತೆ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ.  ತಾವು ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡುವುದು.

      ವಂದನೆಗಳೊಂದಿಗೆ,
                           ತಮ್ಮ ವಿಶ್ವಾಸಿ,
                                        -ಸಹಿ-
                                        (ಡಾ. ಮುಖ್ಯಮಂತ್ರಿ ಚಂದ್ರು)
ಶ್ರೀ ರಾಜ್‌ಕುಮಾರ್ ಖತ್ರಿ  ಭಾ.ಆ.ಸೇ.,
ಪ್ರಧಾನ ಕಾರ್ಯದರ್ಶಿಗಳು,
ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ,
ವಿಕಾಸಸೌಧ, 
ಬೆಂಗಳೂರು
ಪ್ರತಿಯನ್ನು: ಶ್ರೀ ರವಿ, ಬೆಂಗಳೂರು ಇವರಮಾಹಿತಿಗಾಗಿ

********************************************************************

ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಲ್ಲಿ ಕಡದ ಕಡೆಗಣನೆ ಬಗೆಗೆ ನಾನು ಬರೆದ ಪತ್ರ

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಾನು ಬರೆದ ದೂರು ಹೀಗಿದೆ . 
********************************************************************
ಮಾನ್ಯ ಮುಖ್ಯಮಂತ್ರಿಗಳೇ,
ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಆಗುತ್ತಿರುವುದರ ಬಗೆಗೆ ನಾನು ಬರೆದ ದೂರನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. 

ಎಲ್ಲ ಅಂತಾರಾಷ್ಟೀಯ ವಿಮಾನ ನಿಲ್ದಾಣಗಳಲ್ಲಿ ಆಯಾ ಜಾಗದ ಸೊಗಡನ್ನು ಆಯಾ ಜಾಗದ ಭಾಷೆಯನ್ನೂ ಹೊರಗಿನಿಂದ ಬಂದವರಿಗೆ ಮನ ಮುಟ್ಟುವಂತೆ ತೋರ್ಪಡಿಸಲಾಗಿದೆ. ಇಲ್ಲಿ bangkok, Beijing ನ ವಿಮಾನ ನಿಲ್ದಾಣದ ಚಿತ್ರಗಳನ್ನು ಲಗತ್ತಿಸಿದ್ದೇನೆ.

ಆದರೆ BIAL ನಲ್ಲಿ ಕನ್ನಡವನ್ನು ಕಾಟಾಚಾರಕ್ಕೆ ಬಳಸಿದಂತೆ  ಇದೆ. ಭೂತಗನ್ನಡಿ ಹಿಡಿದು ಕನ್ನಡದ ಅಕ್ಷರಗಳನ್ನು ಹುಡುಕಬೇಕು. ಹೆಚ್ಚಾಗಿ ಇಂಗ್ಲಿಷ್ ದಿನಪತ್ರಿಕೆಗಳನ್ನು ಇತ್ತು ಕಾಟಾಚಾರಕ್ಕೆ ಎಲ್ಲೋ ಒಂದು ಮೂಲೆಯಲ್ಲಿ ಕನ್ನಡದ ಒಂದೇ ಒಂದು ದಿನ ಪತ್ರಿಕೆಯನ್ನು ಇಡಲಾಗಿದೆ. ವಿಮಾನ ನಿಲ್ದಾಣದ ಮಿಮ್ಬಲೆಯಲ್ಲಿ ಹುಡುಕಿದರೂ ಒಂದೇ ಒಂದು ಅಕ್ಷರ ಕನ್ನಡದ ಅಕ್ಷರ ಕಾಣಿಸಲ್ಲ. ಪಾರ್ಕಿಂಗ್ ಮಾಡಿದಾಗ ಕೊಡುವ ಚೀಟಿಯಲ್ಲಿ ಸಹ ಕನ್ನಡ ಇಲ್ಲ.

ಈ ರೀತಿ ಕನ್ನಡದ ನೆಲದಲ್ಲಿರುವ , ಕನ್ನಡ ಜನರ ತೆರಿಗೆ ಹಣದಿಂದ ಕಟ್ಟಲಾಗಿರುವ, ಕನ್ನಡಿಗರಿಗೆ ಉಪಯೋಗವಾಗಲಿ ಎಂದು ಕರ್ನಾಟಕ ಸರ್ಕಾರ ಕಟ್ಟಿಸಿದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಆಗುತ್ತಿರುವುದು ವಿಪರ್ಯಾಸವೇ ಸರಿ. ಕನ್ನಡಿಗ ತನ್ನ ನಾಡಿನಲ್ಲೇ ಎರಡನೇ ದರ್ಜೆಯ ಪ್ರಜೆಯಂತೆ ಬದುಕುವ ಹೀನ ಪರಿಸ್ಥಿತಿ ಉಂಟಾಗಿದೆ.

ಈ ರೀತಿ ಕರ್ನಾಟಕದ ಭಾಷಾ ನೀತಿಯನ್ನು ಮೀರಿ ಹೊರಗಿನ ಜನರಿಗೆ ಮಣೆ ಹಾಕುತ್ತಿರುವ  BIAL ಗೆ  ಕನ್ನಡದ ಕಡೆಗಣನೆ ಮಾಡುವುದನ್ನು ನಿಲ್ಲಿಸಿ ಕನ್ನಡಕ್ಕೆ ಸರಿಯಾದ  ಸ್ಥಾನ ಮಾನ ಕೊಡಲು ನಿರ್ದೇಶಿಸಬೇಕೆಂದು ನನ್ನ ಮನವಿ.

--
ರವಿ

********************************************************************

ತ್ರಿಭಾಷಾ ಸೂತ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೇಗೆ ಅನ್ವಯ ಆಗುತ್ತದೆ?

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದರ ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಹ ಕಳಿಸಿದ್ದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತರ ಸಹ ಬಂತು. 

ಅಬಿವ್ರುದ್ದಿ ಪ್ರಾದಿಕಾರ ಇದರ ಬಗ್ಗೆ ಗಮನಹರಿಸಿ ಪತ್ರ ಬರೆದಿರುವುದು ನಿಜಕ್ಕು ಸಂತೋಶದ ವಿಚಾರ ಆದರೆ ಪ್ರಾದಿಕಾರವು ತ್ರಿಬಾಶಾ ಸೂತ್ರದ ಬಳಕೆಯ ಬಗೆಗಿನ ಅರಿವು ಸರಿಯಿಲ್ಲದ್ದಾಗಿದೆ. ತ್ರಿಭಾಷ ಸೂತ್ರ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆ.  ಬೆಂಗಳೂರಿನ ವಿಮಾನ ನಿಲ್ದಾಣ ಕೇಂದ್ರ ಸರಕಾರಿ ಕಚೇರಿಯಲ್ಲದ್ದರಿಂದ  ತ್ರಿಭಾಷ ಸೂತ್ರ ಅನ್ವಯವಾಗುವುದಿಲ್ಲ ಎನ್ನುವುದನ್ನು ತಿಳಿಯಬೇಕಾಗಿದೆ  

ಸುಖಾ ಸುಮ್ಮನೆ ನಮ್ಮ ಮೇಲೆ ನಾವೆ ಹಿಂದಿಯನ್ನು  ಹೇರಿಕೊಳ್ಳುವುದನ್ನು ನಾವು ನಿಲ್ಲಿಸಬೇಕು.  ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗೆಗೆ ಎಚ್ಚರ ವಹಿಸಿ ಸಲ್ಲದ ಹಿಂದಿ ಬಳಕೆಗೆ ಕಡಿವಾಣ ಹಾಕಬೇಕು.

ಕನ್ನಡ ಅಭಿವೃದ್ಢಿ ಪ್ರಾಧಿಕಾರದಿಂದ ಬಂದ ಉತ್ತರ:
********************************************************************

     ಸಂಖ್ಯೆ: ಕಅಪ್ರಾ:ಅ:     :೨೦೧೨-೧೩  
                                                                      ದಿನಾಂಕ: ೨೦-೦೬-೨೦೧೨
      ಮಾನ್ಯರೆ,

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಶಾಸ್ತ್ರೀಯ ಸ್ಥಾನಮಾನ ದೊರೆಕಿರುವ ಹಿನ್ನಲೆಯಲ್ಲಿ ಕನ್ನಡ ಭಾಷೆಯನ್ನು ಎಲ್ಲಾ ಹಂತದಲ್ಲೂ ಬಳಕೆ ಆಗಬೇಕೆನ್ನುವುದು ಸರ್ಕಾರದ ಆಶಯ ಹಾಗೂ ದಿಟ್ಟ ನಿಲುವು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡವನ್ನು ಬಳಸುತ್ತಿಲ್ಲ ಎನ್ನುವ ಬಗ್ಗೆ ಬಹಳಷ್ಟು ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ದಿನಾಂಕ ೨೯-೦೪-೨೦೦೯ರಿಂದಲೂ ಪತ್ರ ಬರೆಯುತ್ತಾಲೇ ಬಂದಿದ್ದೇನೆ.  ಆದರೂ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸದಿರುವುದು, ಕನ್ನಡ ಬಳಸಿರುವ ಕಡೆ ಪ್ರಾಮುಖ್ಯತೆ ನೀಡದಿರುವುದು ದುರದುಷ್ಟಕರ. ಬೇರೆ ದೇಶದ ವಿಮಾನ ನಿಲ್ದಾಣಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಪ್ರಾಧ್ಯಾನತೆ ನೀಡಿರುವ ಬಗ್ಗೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಗ್ಗೆ ರವಿಯವರ ಮನವಿಯನ್ನು ಲಗತ್ತಿಸಿದೆ. ಅಲ್ಲದೆ ವಿಮಾನ ನಿಲ್ದಾಣದ ಅಧಿಕಾರಿಗಳು ಕನ್ನಡವನ್ನು ಲಘುವಾಗಿ ಪರಿಗಣಿಸುತ್ತಿರುವ ಬಗ್ಗೆ ಜೂನ್ ೨೦, ೨೦೧೨ರ ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ವಾಚಕರ ವಿಜಯ ಅಂಕಣದಲ್ಲಿ ಪ್ರಕಟಗೊಂಡಿರುವ “ಕನ್ನಡ ಕಡೆಗಣನೆ” ಸುದ್ದಿಯ ತುಣುಕನ್ನು ಇದರೊಂದಿಗೆ ಲಗತ್ತಿಸಿದೆ.

     ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳ್ಳಿಸುವಲಿ, ವಿಮಾನ ನಿಲ್ದಾಣದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಕನ್ನಡ ನೆಲದ ಕಾನೂನಿಗೆ ಅಗೌರವ ತೋರುತ್ತಿರುವುದೇ ಅಲ್ಲದೆ, ಕನ್ನಡ ನಾಡಿನ ಜನರ ತೆರಿಗೆ ಹಣದಲ್ಲಿ ಜೀವನ ನಿರ್ವಹಿಸುತ್ತಿರುವ ಅಧಿಕಾರಿಗಳು ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನೋಭೂಮಿಕೆಯನ್ನು ಬೆಳಸಿಕೊಳ್ಳುವ ಮೂಲಕ ಉದ್ದಟತನ ಪ್ರದರ್ಶಿಸುತ್ತಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.
     ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರತಕ್ಕದು ಮತ್ತು ಭಾಷೆಗಳನ್ನು ಬಳಸುವ ಸಂದರ್ಭದಲ್ಲಿ ಕನ್ನಡ ಆವೃತ್ತಿಯ ಕೆಳಗೆಬರತಕ್ಕದು.  ಕನ್ನಡ ನಾಮಫಲಕವನ್ನು ಹೆಚ್ಚು ಎದ್ದುಕಾಣುವಂತೆ ಬರೆಸತಕ್ಕದು. ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿ ಅಂತರ್ಜಾಲತಾಣದಲ್ಲಿ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಬೇಕು. ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆಯ ಚೀಟಿಯನ್ನು ಆಂಗ್ಲಭಾಷೆಯ ಜೊತೆಗೆ ಕನ್ನಡವನ್ನು ಪ್ರಧಾನವಾಗಿ ಮುದ್ರಿಸುವುದು. ಅಲ್ಲದೆ ಇತರಭಾಷಾ ಪತ್ರಿಕೆಗಳ ಜೊತೆ ಕನ್ನಡ ಪತ್ರಿಕೆಗಳು ದೊರೆಯುವಂತೆ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ.  ತಾವು ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡುವುದು.
      ವಂದನೆಗಳೊಂದಿಗೆ,
                           ತಮ್ಮ ವಿಶ್ವಾಸಿ,
                                        -ಸಹಿ-
                                        (ಡಾ. ಮುಖ್ಯಮಂತ್ರಿ ಚಂದ್ರು)
ಶ್ರೀ ರಾಜ್‌ಕುಮಾರ್ ಖತ್ರಿ  ಭಾ.ಆ.ಸೇ.,
ಪ್ರಧಾನ ಕಾರ್ಯದರ್ಶಿಗಳು,
ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ,
ವಿಕಾಸಸೌಧ,
ಬೆಂಗಳೂರು
ಪ್ರತಿಯನ್ನು: ಶ್ರೀ ರವಿ, ಬೆಂಗಳೂರು ಇವರಮಾಹಿತಿಗಾಗಿ
********************************************************************

Wednesday, April 4, 2012

ಕನ್ನಡದಲ್ಲೂ ಮಾಹಿತಿ ಮುದ್ರಿತವಾಗಲಿ

ಇತ್ತೀಚಿಗೆ ಪೆಪ್ಸಿಕೋ ರವರ ಲೇಸ್ , ಮ್ಯಾಕ್ ಡೋನಾಲ್ದ್ ರವರ ಬರ್ಗರ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರವಾಗುವಂಥಹ ಕೊಬ್ಬಿನಂಶ ಹೆಚ್ಚಾಗಿ ಇದೆ ಅನ್ನೋದರ ಬಗ್ಗೆ ಸುದ್ದಿ ಪ್ರಚಾರದಲ್ಲಿದೆ. ತಯಾರಕರು ತಮ್ಮ ಉತ್ಪಾದನೆಗಳಲ್ಲಿ ಯಾವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿದೆ ಎಂದು ಗ್ರಾಹಕನಿಗೆ ಸರಿಯಾಗಿ ತಿಳಿಸುವುದು ಅವರ ಕರ್ತವ್ಯ. ಹಾಗೆಯೇ ಅದನ್ನು ಕೇಳಿ ಪಡೆಯುವುದೂ ಸಹ ಒಬ್ಬ ಗ್ರಾಹಕನಹಕ್ಕು ಆಗಿದೆ. Centre for Science and Environment (CSE) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ಆದರೆ ಇಂಥಹ ಚರ್ಚೆಗಳಲ್ಲಿ ಈ ಮಾಹಿತಿಯನ್ನು ಜನರು ಅರಿಯಬೇಕಾದರೆ ಅದು ಜನರ ಭಾಷೆಯಲ್ಲಿ ಇರಬೇಕು ಅನ್ನೋ ಅತಿ ಮುಖ್ಯವಾದ ಅಂಶವನ್ನು ಮರೆತ ಹಾಗಿದೆ. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ೭% ಜನರಿಗೆ ಮಾತ್ರ ಇಂಗ್ಲಿಷ್ ನಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಬಲ್ಲರು. ಮಿಕ್ಕ ೯೩% ಜನರಿಗೆ ಇಂಗ್ಲಿಷ್ ನಲ್ಲಿ ಮಾಹಿತಿ ತಲುಪಿಸಲಾಗದ ಪರಿಸ್ಥಿತಿ ಇರುವಾಗ , ಕೇವಲ ಇಂಗ್ಲಿಷ್ನಲ್ಲಿ ಮಾಹಿತಿಯನ್ನು ನಮೂದಿಸಿದರೆ ನಮ್ಮ ಜನರಿಗೆ ಹೇಗೆ ಅರ್ಥವಾದೀತು? ಒಬ್ಬ ಕನ್ನಡ ಮಾತ್ರ ಬರುವ ಗ್ರಾಹಕನೂ ಸಹ ಅಷ್ಟೇ ದುಡ್ಡು ಕೊಟ್ಟು ಖರೀದಿ ಮಾಡಿರುತ್ತಾನೆ. ಅವನಿಗೆ ಆ ಸಾಮಗ್ರಿಯ ಬಗೆಗೆ ಮಾಹಿತಿಯನ್ನು ತಿಳಿಸದಿರುವುದು ಯಾವ ನ್ಯಾಯ ?

ಗುಣಮಟ್ಟ,ಗರಿಷ್ಟ ಬೆಲೆ , ತೂಕಗಳ ಬಗೆಗೆ ಕನ್ನಡವೂ ಸೇರಿದಂತೆ ಆಯಾ ಪ್ರದೇಶದ ಸ್ಥಳೀಯ ಭಾಷೆಗಳಲ್ಲೂ ಸಹ ಮಾಹಿತಿಯನ್ನು ಮುದ್ರಿಸಬೇಕು. ಈ ಬಗೆಗೆ ಸರಿಯಾದ ಚರ್ಚೆಗಳಾಗಿ ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ತಿಳಿಸಲೇಬೇಕು ಅನ್ನುವಂಥಹ ನೀತಿ ನಿಯಮಗಳನ್ನು ರೂಪಿಸಬೇಕು.

Monday, March 12, 2012

ನಮ್ಮ ಮೇಟ್ರೋದಲ್ಲಿ ಇನ್ನೂ ಸಿಗದ ಕನ್ನಡ

ಕೆಲ ತಿಂಗಳ ಹಿಂದೆ "ನಮ್ಮ ಮೆಟ್ರೋ" ವಿನ ಅಧಿಕಾರಿಗಳು ದೈನಂದಿನ ಎಲ್ಲ ವ್ಯವಹಾರಗಳಲ್ಲಿ ಕನ್ನಡವನ್ನು ಬಳಕೆ ಮಾಡುವುದಾಗಿ ಹೇಳಿದ್ದರು. ಹಾಗೆಯೇ ಹೊರಗುತ್ತಿಗೆ ಕೊಟ್ಟಿರುವ ಸೆಕ್ಯೂರಿಟಿ ಗಾರ್ಡ್ ಎಜೆನ್ಸಿ ನವರಿಗೆ ಕನ್ನಡ ಓದಲು ಬರೆಯಲು ಬರುವವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ನಿಯಮ ಹಾಕಿದೀವಿ ಅಂತ ಸಹ ಹೇಳಿದ್ದರು. ಮೆಟ್ರೋ ಅಧಿಕಾರಿಗಳ ಹೇಳಿಕೆಗಳ ತುಣುಕು ಹೀಗಿದೆ. ಇವರು ಎಷ್ಟರ ಮಟ್ಟಿಗೆ ತಮ್ಮ ನಿಯಮಗಳನ್ನು ತಾವೇ ಪಾಲಿಸುತ್ತಾ ಇದಾರೆ ಅಂತ ನೋಡೋಣ.

ನೆನ್ನೆ ಮೇಟ್ರೋದಲ್ಲಿ ಒಮ್ಮೆ ಹೋಗಿ ಬರೋಣವೆಂದು ಮನೆ ಮಂದಿಯೆಲ್ಲ ಹೋಗಿದ್ದೆವು. ಮೆಟ್ರೋ ದಲ್ಲಿ ಈಗಲಾದರೂ ಕನ್ನಡ ಬಾರದ ಸೆಕ್ಯೂರಿಟಿ ಗಾರ್ಡ್ ಗಳಿಂದ ಮುಕ್ತಿ ಸಿಕ್ಕಿರಬಹುದೇನೋ ಅಂದುಕೊಂಡಿದ್ದೆ. ಆದರೆ ಬಯ್ಯಪ್ಪನಹಳ್ಳಿಯಲ್ಲಿ ಸಿಕ್ಕ ಮೊದಲ ಸೆಕ್ಯೂರಿಟಿ ಗಾರ್ಡ್ ಹಿಂದಿಯಲ್ಲಿ ಮಾತಾಡಿಸಲು ಶುರು ಮಾಡಿದ. ಕನ್ನಡದಲ್ಲಿ ಮಾತಾಡಿಸಿದಾಗ ಕನ್ನಡ ತನಗೆ ಗೊತ್ತಿಲ್ಲವೆಂದು ಉತ್ತರ ಕೊಟ್ಟ. ಕೆಲ ದಿನಗಳ ಹಿಂದೆ ಇದೆ ರೀತಿಯ ಧೋರಣೆಯ ಉತ್ತರವನ್ನು ಮೆಟ್ರೋ ಸೆಕ್ಯೂರಿಟಿ ಗಾರ್ಡ್ ಗಳು ಖಾಸಗಿ ಕನ್ನಡ ವಾಹಿನಿಗಳಿಗೆ ಕೊಟ್ಟಿದ್ದನ್ನು ಇಲ್ಲಿ ನೆನೆಯಬಹುದು.

ಇದನ್ನು ನೋಡಿದರೆ ಗಾರ್ಡ್ ವೆಲ್ ಸೆಕ್ಯೂರಿಟಿ ಎಜೆನ್ಸಿ ಗೆ ಕನ್ನಡ ಬರುವವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಅಂತ ಶರತ್ತನ್ನು ನಿಜವಾಗಲೂ ವಿಧಿಸಿದ್ದಾರ ಅಂತ ಅನುಮಾನ ಬರುತ್ತದೆ.ದಿನಕ್ಕೆ ಸಾವಿರಾರು ಜನರನ್ನು ತಪಾಸಣೆ ಮಾಡುವ ಇವರಿಗೆ ಕನ್ನಡವೇ ಗೊತ್ತಿರದಿದ್ದರೆ ಹೇಗೆ? ಬೆಂಗಳೂರಿನ ಮೆಟ್ರೋ ಸ್ಟೇಷನ್ ಒಳಗೆ ಹಿಂದಿ ಕಲಿತೆ ಕಾಲಿಡಬೇಕು ಎಂದರೆ ಹೇಗೆ?

ಸೆಕ್ಯೂರಿಟಿ ಗಾರ್ಡ್ ಗಳ ಅವಸ್ಥೆ ಹೀಗೆ . ಇನ್ನು ಪಾಸುಗಳಲ್ಲಿ ಎಷ್ಟು ಹಣ ಬಾಕಿ ಉಳಿದಿದೆ ಅಂತ ನೋಡೋಕೆ ಹೋದೆ. ಆ ಮಷಿನ್ ಬಳಿ ನನ್ನ ಮೆಟ್ರೋ ಕಾರ್ಡ್ ಅನ್ನು ತೋರಿಸಿದಾಗ ನನಗೆ ಅಚ್ಚರಿ ಕಾಡಿತ್ತು. ಎಲ್ಲವೂ ಹಿಂದಿ ಮಯ. ಮೆಟ್ರೋ ಬಳಸೋರು ಕೇವಲ ಹಿಂದಿ ಬಲ್ಲವರು ಮಾತ್ರ ಎಂದು ಇವರು ನಂಬಿದ ಹಾಗೆ ಇದೆ.
ನಮ್ಮ ಎಲ್ಲ ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನೇ ಬಳಸುತ್ತೇವೆ ಅಂತ ಹೇಳಿರುವುದು ಬರಿ ಸುಳ್ಳಿನ ಕಂತೆಯಷ್ಟೇ. ಬೆಂಗಳೂರಿನ ನಮ್ಮಮೆಟ್ರೋ ದಲ್ಲಿ ಎಲ್ಲ ಸೇವೆಗಳನ್ನು ಕನ್ನಡದಲ್ಲಿ ಕೊಡುವುದರ ಮಹತ್ತ್ವವನ್ನು ಇನ್ನಾದರೂ ಅರಿತು ಜವಾಬ್ದಾರಿಯಿಂದ ನಡೆಯಲಿ ಎಂದು ಇವರಿಗೆ ತಿಳಿಸೋಣ. ಈ ಬಗ್ಗೆ ಮೆಟ್ರೋ ಅಧಿಕಾರಿಗಳಿಗೆ ಈ ವಿಳಾಸಕ್ಕೆ ದೂರು ಕೊಡಬಹುದು bmrcl@dataone.in.

Wednesday, January 18, 2012

ಭಾಷಾ ಆಯಾಮದಲ್ಲಿ "Consumer Protection Act"

ಒಬ್ಬ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಮೋಸವಾಗದಂತೆ ರಕ್ಷಣೆ ಕೊಡಲು "Consumer Protection Act" ಮಸೂದೆಯನ್ನು 1986 ನಲ್ಲಿ ಅಂಗೀಕರಿಸಲಾಯಿತು. ಒಬ್ಬ ಕನ್ನಡಿಗನಿಗೆ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ಪಡೆಯಲು ಈ ಮಸೂದೆ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ.

"Consumer Protection Act" ನಲ್ಲಿ ಗ್ರಾಹಕನ ಕೆಲ ಮೂಲಭೂತ ಹಕ್ಕನ್ನು ಹಾಗೂ ಅವುಗಳನ್ನು ಬಳಸಿಕೊಳ್ಳಬಹುದಾದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ.

(a) the right to be protected against the marketing of goods and services which are hazardous to life and property;
ಒಬ್ಬ ಗ್ರಾಹಕನಿಗೆ ತನ್ನ ಜೀವಕ್ಕೆ ಅಥವಾ ತನ್ನ ಆಸ್ತಿಗೆ ಹಾನಿ ತರಬಹುದಾದ ಸಾಮಗ್ರಿಗಳ ಮಾರಾಟದಿಂದ ರಕ್ಷಣೆ ಪಡೆಯುವ ಹಕ್ಕು ಇದೆ. ಆದರೆ ನಾವು ದಿನ ನಿತ್ಯ ಬಳಸುವ ಅಡುಗೆ cylinder ಗಳ ಮೇಲೆ , ದೀಪಾವಳಿಯಲ್ಲಿ ಸುಡುವ ಪಟಾಕಿಗಳ ಸೂಚನೆಗಳ ಮೇಲೆ , ಔಷಧಿಗಳಲ್ಲಿ ಕನ್ನಡದ ಸೂಚನೆಗಳು ಇಲ್ಲದಾಗಿದೆ. ಸರಿಯಾಗಿ ಬಳಸಲು ಸೂಚನೆಗಳು ಗ್ರಾಹಕರಿಗೆ ಕೊಡದೆ ಇದ್ದುದರಿಂದ ,ಈ ವಸ್ತುಗಳ ಬಳಕೆಗಳಿಂದ ಜನರ ಆಸ್ತಿಗೆ ಅಥವಾ ಜೀವಕ್ಕೆ ಹಾನಿ ಉಂಟಾಗಬಹುದು. ಹಾಗಾಗಿ ಈ ಎಲ್ಲ ವಸ್ತುಗಳ ಮೇಲೂ ಸಹ ಕನ್ನಡದ ಸೂಚನೆ ಇರಲೇಬೇಕಾಗಿದೆ. ವಿಮಾನಗಳಲ್ಲಿ , ರೈಲುಗಳಲ್ಲಿ ,ಸುರಕ್ಷತಾ ಸೂಚನೆಗಳು ಹಾಗೂ ಘೋಷಣೆಗಳು ಇದಕ್ಕೆ ಹೊರತಲ್ಲ.

(b )the right to be informed about the quality, quantity, potency, purity, standard and price of goods or services, as the case may be so as to protect the consumer against unfair trade practices;
ಗ್ರಾಹಕನಿಗೆ ತಾನು ಕೊಳ್ಳುತ್ತಿರುವ ಸಾಮಗ್ರಿಯ ಬಗೆಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ಇದೆ. ಅದು ಒಂದು ಶಾಂಪೂ ಆಗಿರಬಹುದು, ಟೀವಿ, ವಾಶಿಂಗ್ ಮಶಿನ್ ಆಗಿರಬಹುದು , ready to eat ಪ್ಯಾಕೆಟ್ ಗಳು ಆಗಿರಬಹುದು, ಅಕ್ಕಿ, ಬೇಳೆ ಕಾಳುಗಳು ಆಗಿರಬಹುದು, ಹೀಗೆ ಎಲ್ಲ ಸಾಮಗ್ರಿಗಳ ಮೇಲೆ ಕನ್ನಡದಲ್ಲಿ ಮಾಹಿತಿಗಳು ಇರಬೇಕು.

(c ) the right to be assured, wherever possible, access to a variety of goods and services at competitive prices;
ಮಾರುಕಟ್ಟೆಯ ಸರಕನ್ನು ಗ್ರಾಹಕರಿಗೆ ಪಡೆಯುವ ಹಕ್ಕು ಇದೆ ಎಂದು ತಿಳಿಸುತ್ತದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬ್ಯಾಂಕ್ ಗಳಲ್ಲಿ ಸೇವೆಗಳನ್ನು ಕೊಡುವುದರಿಂದ ಕನ್ನಡ ಮಾತ್ರ ಬಲ್ಲ ಜನರಿಗೆ ಬ್ಯಾಂಕಿಂಗ್ ಮೊದಲಾದ ಮೂಲಭೂತ ಸೌಕರ್ಯಗಳು ಸಿಕ್ಕದಂತಾಗಿದೆ. ಈ ನಿಯಮವನ್ನು ಬಳಸಿಕೊಂಡೂ ಸಹ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೊಡಿ ಎಂದು ಕೇಳಬಹುದು. ಡಬ್ಬಿಂಗ್ ಮಾಡಲು ಬಿಡದೆ ಕನ್ನಡದ ಮನೋರಂಜನೆಯಿಂದ ಕನ್ನಡಿಗರು ವಂಚಿತರಾಗಿದ್ದಾರೆ. ಡಬ್ಬಿಂಗ್ ವಿಷಯವಾಗಿಯೂ ಈ ನಿಯಮ ಅನ್ವಯಿಸುತ್ತದೆ.

ಈ ನಿಯಮಗಳ ಉಲ್ಲಂಘನೆಯಾದರೆ ಸಮಾನ ಮನಸ್ಕರಾದ ಗ್ರಾಹಕರು ಜಿಲ್ಲಾ forum ಗಳಲ್ಲಿ ದೂರು ಕೊಡಬಹುದು ಎಂದು ಹೇಳಲಾಗಿದೆ .

one or more consumers, where there are numerous consumers having the same interest, with the permission of the District Forum, on behalf of, or for the benefit of, all consumers so interested;

ಎಲ್ಲ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ನೀತಿ ನಿಯಮಗಳು ಇವೆ. ಗ್ರಾಹಕರಾದ ನಾವುಗಳು ನಮ್ಮ ಹಕ್ಕುಗಳನ್ನು ಅರಿತು ಮಾರುಕಟ್ಟೆಯಲ್ಲಿ ಕನ್ನಡದ ಬಳಕೆ ಹೆಚ್ಚು ಹೆಚ್ಚು ಆಗುವಂತೆ ಮಾಡಬೇಕು.

Friday, December 30, 2011

ಸ್ಥಳೀಯ ಭಾಷೆಗಳ ಬಳಕೆಯ ಬಗೆಗೆ RBI ಹಾಗೂ BCSBI ಏನು ಹೇಳುತ್ತದೆ?

ಇತ್ತೀಚಿಗೆ ಹಲವಾರು ಕನ್ನಡಿಗ ಗ್ರಾಹಕರು ತಮಗೆ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೊಡಬೇಕು ಎಂದು ಬ್ಯಾಂಕ್ ಗಳಿಗೆ ದೂರನ್ನು ಕೊಟ್ಟಿದಾರೆ. ಕೆಲವು ಬ್ಯಾಂಕ್ ಗಳು ಗ್ರಾಹಕರ ದೂರಿಗೆ ಸ್ಪಂದಿಸಿ ಕನ್ನಡದಲ್ಲಿ ಸೇವೆ ಕೊಟ್ಟಿದಾರೆ. ಮತ್ತೆ ಕೆಲವರು ಕೊಡುವುದಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ ಸಂಗತಿಗಳು ಇದೆ.

RBI ಹಾಗೂ BCSBI ಭಾಷೆಯ ಬಳಕೆಯ ಬಗ್ಗೆ ಏನು ಹೇಳುತ್ತದೆ ಹಾಗೂ ಕನ್ನಡದಲ್ಲಿ ಸೇವೆ ಕೊಡಲು ನಿರಾಕರಿಸಿದರೆ ಬ್ಯಾಂಕ್ ಗಳ ಲೋಕಪಾಲರಿಗೆ(Banking ombudsman) ದೂರು ಕೊಡುವುದು ಹೇಗೆ ಅಂತ ಇಲ್ಲಿ ಕಲೆ ಹಾಕಲಾಗಿದೆ. ಕನ್ನಡದಲ್ಲಿ ಸೇವೆ ಸಿಗದೇ ಹೋದರೆ ಈ ನಿಯಮಗಳನ್ನು ತಿಳಿಸಿ ಬ್ಯಾಂಕ್ ಗಳಿಗೆ ದೂರು ಕೊಡಿ.

ಭಾಷಾ ಆಯಾಮದಲ್ಲಿ RBI ನಿರ್ದೇಶನ ಹೀಗಿದೆ
"In order to ensure that banking facilities percolate to the vast sections of the population,banks should make available all printed material used by retail customers including account opening forms, pay-in-slips, passbooks etc. in trilingual form i.e. English, Hindi and the concerned Regional Language."
http://rbi.org.in/scripts/BS_ViewMasCirculardetails.aspx?Id=2673&Mode=0
"ಎಲ್ಲ ಜನರಿಗೆ ಉಪಯೋಗ ಆಗುವಂತೆ ಚೆಕ್ಕು, ಪಾಸ್ ಬುಕ್ ಗಳು ಸೇರಿದಂತೆ ಎಲ್ಲ ಮುದ್ರಿತ ಸಾಮಗ್ರಿಗಳನ್ನು (printed material) ಸ್ಥಳೀಯ ಭಾಷೆಗಳಲ್ಲಿಯೂ ಕೊಡಬೇಕು "

ಭಾಷಾ ಆಯಾಮದಲ್ಲಿ Code of Banks Commitment to Customers ಏನು ಹೇಳುತ್ತದೆ?
"Key commitment of BCSBI is to help You To Understand How Our Financial Products And Services Work By Giving you information about them in any one or more of the following languages – Hindi, English or the appropriate local language"

http://www.bcsbi.org.in/pdf/CodeOfBanks_Aug09.pdf

ಬ್ಯಾಂಕಿಂಗ್ ಲೋಕಪಾಲರಿಗೆ ಯಾವ ವಿಷಯಗಳಿಗೆ ದೂರು ಕೊಡಬಹುದು?

-> any matter relating to the violation of the directives issued by the Reserve Bank in relation to banking or other services

-> non-adherence to the provisions of Fair Practices Code for lenders as adopted by the banks or Code of Banks Commitment to Customers

http://www.rbi.org.in/scripts/FAQView.aspx?Id=24

ಸ್ಥಳೀಯ ಭಾಷೆಗಳಲ್ಲಿ ಸೇವೆ ಕೊಡಲು ಬ್ಯಾಂಕ್ ಗಳು ನಿರಾಕರಿಸಿದರೆ ಬ್ಯಾಂಕಿಂಗ್ ಲೋಕಪಾಲರಿಗೆ ದೂರು ಕೊಡಬಹುದು ಅಂತ RBI ಸೂಚನೆ ನೀಡಿದೆ

ಬ್ಯಾಂಕಿಂಗ್ ಲೋಕಪಾಲರಿಗೆ ಹೇಗೆ ದೂರನ್ನು ಕೊಡಬಹುದು?
ನಿಮ್ಮ ದೂರನ್ನು bobangalore@rbi.org.in ಇಲ್ಲಿಗೆ ಮಿಂಚಿಸಬಹುದು
https://secweb.rbi.org.in/BO/compltindex.htm ಇಲ್ಲಿ ಸಹ ದೂರನ್ನು ದಾಖಲಿಸಬಹುದು

ಲೋಕಪಾಲರಿಗೆ ದೂರು ಕೊಟ್ಟ ಮೇಲೆ ಏನಾಗತ್ತೆ?

ದೂರು ಕೊಟ್ಟ ನಂತರ ಬ್ಯಾಂಕಿಂಗ್ ಲೋಕಪಾಲರು ದೂರಿನ ಬಗ್ಗೆ ಗಮನ ಹರಿಸಲು ಬ್ಯಾಂಕ್ ಗಳಿಗೆ ಆದೇಶಿಸುತ್ತಾರೆ. ಬ್ಯಾಂಕಿಂಗ್ ಲೋಕಪಾಲರಿಂದಲೂ ಸಮಸ್ಯೆ ಬಗೆ ಹರಿಯದಿದ್ದರೆ RBI ನ ಡೆಪ್ಯುಟಿ ಗೋವರ್ನರ್ ಗೆ ದೂರನ್ನು ಕೊಡಬಹುದು.